ಮೈಸೂರು: ಬುಧವಾರದಂದು ದೆಹಲಿಯಲ್ಲಿ ನಡೆಯುವ 73ನೇ ಗಣರಾಜ್ಯೋತ್ಸವ ಆಚರಣೆಯ ಪರೇಡ್ನಲ್ಲಿ ಮೈಸೂರಿನ ವಿದ್ಯಾರ್ಥಿನಿಗೆ ಎನ್ಸಿಸಿ ನೇತೃತ್ವ ವಹಿಸಲಿದ್ದಾರೆ.
ಪ್ರಮೀಳಾ ಕುವರ್ ಅವರು ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿದ್ದು, ಇವರು ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ. ಪ್ರಮೀಳಾ ಅವರು ಪ್ರತಾಪ್ ಸಿಂಗ್ ಹಾಗೂ ಪುಷ್ಪಾ ಕುವರ್ ಅವರ ಪುತ್ರಿ. ಇವರ ತಂದೆ ಪ್ರತಾಪ್ ಸಿಂಹ ಅವರು ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ.
ಪ್ರಮೀಳಾ ಕುವರ್ ಅವರು ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ ಸಿ ವಿದ್ಯಾರ್ಥಿನಿ. ಹಾಗೂ ಇವರು ಜಯಲಕ್ಷ್ಮಿಪುರಂನ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಕೆಡೆಟ್ ಪರೇಡ್ನಲ್ಲಿ ಎನ್ಸಿಸಿ ತಂಡದ ನೇತೃತ್ವ ವಹಿಸಲಿದ್ದಾರೆ. ಈ ಹಿಂದೆ ಪ್ರಮೀಳಾ ಕುವರ್ ಅವರು 2018 ರ ದಸರಾ ಮೆರವಣಿಗೆಯಲ್ಲಿ ತಂಡದ ಎನ್ಸಿಸಿ ತಂಡದ ನೇತೃತ್ವ ವಹಿಸಿಕೊಂಡಿದ್ದರು.












