ಕವಿ, ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

ಕವಿ, ಹಿರಿಯ ಪತ್ರಕರ್ತರಾಗಿದ್ದ  ಜಿ.ಎಂ.ಕುಲಕರ್ಣಿ(58) ಅವರು ತೀವ್ರ ಅನಾರೋಗ್ಯದಿಂದ ಇದ್ದು, ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅವರು ‘ಕತ್ತಲಲ್ಲಿ ಕಾಲಿ ತಟ್ಟೆ ಹಿಡಿದವರು’ ಎಂಬ ಕವನ ಸಂಕಲನ ಹೊರತಂದಿದ್ದರು. ಅಲ್ಲದೆ ಜೊತೆಗೆ ‘ಸಿಂಚನ ಪ್ರಕಾಶ’ನ ಹೊಂದಿದ್ದರು. ತಮ್ಮ ಪ್ರಕಾಶನದ ಮೂಲಕ ಅನೇಕ ಲೇಖಕರ ಪುಸ್ತಕವನ್ನು ಪ್ರಕಟಿಸುತ್ತಿದ್ದರು.

ಜಿ.ಎಂ.ಕುಲಕರ್ಣಿ ಅವರ ಕೊಡುಗೆ ಮಾಧ್ಯಮ ಲೋಕದಲ್ಲಿ ಅಪಾರವಾಗಿದ್ದು, ಹಾಗೂ ಅವರ ಹೆಸರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಚಲಿತದಲ್ಲಿತ್ತು.

ನಾಡಿನ ಅನೇಕ ಹಿರಿಯ ಸಾಹಿತಿಗಳೊಂದಿಗೆ, ಮಠಾಧೀಶರೊಂದಿಗೆ ಒಡನಾಟ ಹೊಂದಿದ್ದರು. ಅವರ ನಿಧನದಿಂದ ಸಾಹಿತ್ಯ ಹಾಗೂ ಮಾಧ್ಯಮರಂಗಕ್ಕೆ ಬಹುದೊಡ್ಡ ಹಾನಿಯಾಗಿದ್ದು,  ಕುಲಕರ್ಣಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಪತ್ರಕರ್ತರ ಬಳಗ ಸಂತಾಪ ಸೂಚಿಸಿದರು.