ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಆಫೀಸರ್ ಹುದ್ದೆ: ಇಂದೇ ಅರ್ಜಿ ಸಲ್ಲಿಸಿ

ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಗ್ರೂಪ್ ಎ (ಸೈಂಟಿಫಿಕ್ ಆಫೀಸರ್) ಪೋಸ್ಟ್ ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ barc.gov.in ಗೆ ಭೇಟಿ ನೀಡಬಹುದು.

ವಿದ್ಯಾರ್ಹತೆ:
ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ನೇಮಕಾತಿ  ಅಧಿಸೂಚನೆ ಪ್ರಕಾರ, ಗ್ರೂಪ್ ಎ (ಸೈಂಟಿಫಿಕ್ ಆಫೀಸರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್, ಬಿಎಸ್ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು- ಗರಿಷ್ಠ 26 ವರ್ಷ
ಒಬಿಸಿ ಅಭ್ಯರ್ಥಿಗಳು- ಗರಿಷ್ಠ 29 ವರ್ಷ
SC/ST ಅಭ್ಯರ್ಥಿಗಳು- ಗರಿಷ್ಠ 31 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ: 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ವೇತನ: ಗ್ರೂಪ್ ಎ(ಸೈಂಟಿಫಿಕ್ ಆಫೀಸರ್) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 55,000 ಸ್ಟೆಫಂಡ್ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಟೆಸ್ಟ್
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜನವರಿ 17, 2022
ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 11, 2022
ಆನ್‌ಲೈನ್ ಪರೀಕ್ಷೆಯ ಸ್ಲಾಟ್ ಬುಕಿಂಗ್: ಮಾರ್ಚ್ 4 ರಿಂದ ಮಾರ್ಚ್ 18, 2022
ಆನ್‌ಲೈನ್ ಪರೀಕ್ಷೆ: ಏಪ್ರಿಲ್ 7 ರಿಂದ ಏಪ್ರಿಲ್ 13, 2022
ಅಭ್ಯರ್ಥಿಗಳು GATE ಸ್ಕೋರ್ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: ಏಪ್ರಿಲ್ 13, 2022