ಸದಸ್ಯತ್ವ ಅಭಿಯಾನದತ್ತ ಹೆಚ್ಚಿನ ಗಮನ ಹರಿಸಿ: ಸಹಕಾರ ಭಾರತೀ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಕರೆ

ಉಡುಪಿ: ದೇಶದಲ್ಲಿ ಸಹಕಾರ ಭಾರತೀಯ ದ್ಯೇಯೋದ್ದೇಶಗಳು ವ್ಯಾಪಕವಾಗಿ ಜಾಗ್ರತವಾಗಬೇಕಾದರೆ ಮತ್ತು ಸಹಕಾರಿ ರಂಗ ಮತ್ತಷ್ಟು ಪ್ರಬಲಗೊಳ್ಳಬೇಕಾದರೆ ಇದರ ಸದಸ್ಯರ ಪಾತ್ರ ಮಹತ್ವಪೂರ್ಣವಾಗಿದ್ದು ಸಹಕಾರಿ ಪ್ರಮುಖರು ಸದಸ್ಯತ್ವ ಅಭಿಯಾನವನ್ನು ನಡೆಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಹಕಾರಿ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಸಹಕಾರಿ ಪ್ರಮುಖರಿಗೆ ಕರೆ ನೀಡಿದರು. ಅವರು ಶುಕ್ರವಾರ ಉಡುಪಿ ತಾಲೂಕು ಸಹಕಾರ ಭಾರತೀಯ ಆಶ್ರಯದಲ್ಲಿ ಇಂಡಸ್ಟ್ರಿಯಲ್ ಕಾರ್ಪೊರೇಟರ್ ಸೊಸೈಟಿ ಕಿನ್ನಿಮುಲ್ಕಿ ಸಭಾಂಗಣದಲ್ಲಿ ಆಯೋಜಿಸಿದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತಾನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆಗಳನ್ನು ನೀಡಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಎಲ್ಲ ತಾಲೂಕು ಸಂಘಟನೆಗಳು ಸರಕಾರಕ್ಕೆ ಪೂರಕವಾಗಿ ಕೆಲಸ ಮಾಡಲು ಸಿದ್ಧರಾಗಿರಬೇಕು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿಯವರು ವಹಿಸಿ ಸ್ವಾಗತಿಸಿದರು. ಮಂಗಳೂರು ವಿಭಾಗ ಪ್ರಮುಖ ಮೋಹನ್ ಕುಂಬ್ಳೆಕರ್ ಸಹಕಾರ ಭಾರತಿ ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ಹಂಚಿಕೆ ಮಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯರವರು ಪ್ರಾಸ್ತಾವಿಕವಾಗಿ ಮಾತಾಡಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಮಹಿಳಾ ಪ್ರಕೋಷ್ಠದ ಸಂಚಾಲಕರಾದ ವಿಜೇತ ವಿದ್ಯಾ ಪೈ , ಇಂಡಸ್ಟ್ರಿಯಲ್ ಕೋ – ಅಪರೇಟಿವ್ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ದೆ ಉಪಸ್ಥಿತರಿದ್ದರು. ಶ್ರೀ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷರು ಇಂಡಸ್ಟ್ರಿಯಲ್ ಕೋಪರೇಟಿವ್ ಸೊಸೈಟಿ ಇವರನ್ನು ಸನ್ಮಾನಿಸಲಾಯಿತು. ಪ್ರದೀಪ್ ನಾಯಕ್ ವಂದನಾರ್ಪಣೆ ಮಾಡಿದರು. ಸಂಘಟನಾ ಕಾರ್ಯದರ್ಶಿ ಡಾl ಬಾಲಕೃಷ್ಣ ಮದ್ದೊಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.