ಹೆಬ್ರಿ: ಶಿವಪುರ ಕೆರೆಬೆಟ್ಟು ಎಂಬಲ್ಲಿನ ಯುವಕ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ರವಿವಾರ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶಿವಪುರ ಕೆರೆಬೆಟ್ಟು ನಿವಾಸಿ ಸತೀಶ ಶೆಟ್ಟಿ, ಮಮತಾ ಶೆಟ್ಟಿ ದಂಪತಿಯ ಪುತ್ರ ಹೆಬ್ರಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೆ ತರಗತಿಯ ಅನ್ವಿತ್ ಶೆಟ್ಟಿ (14) ರವಿವಾರ ಬೆಳಿಗ್ಗೆ ತನ್ನ ಮನೆಯ ಬಾತ್ ರೂಮಿನಲ್ಲಿರುವ ಕಬ್ಬಿಣದ ರಾಡ್ ಗೆ ಚೂಡಿದಾರದ ವೇಲ್ ಅನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಮನೆಯ ಬಾತ್ ರೂಮಿಗೆ ಹೋಗಿ ಕೆಲ ಸಮಯ ಆದರೂ ಅಣ್ಣ ಬರಲಿಲ್ಲ ಅಂತ ತಮ್ಮ ಬಾಗಿಲು ಬಡಿದರೂ ಬಾಗಿಲು ತೆಗೆಯದಿದ್ದಾಗ ಐದನೇ ತರಗತಿ ಓದುತ್ತಿರುವ ಸಹೋದರ ಬಾತ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡಿದಾಗ ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು.
ಪೋಷಕರು ಕೂಡಲೇ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆತಂದರು, ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದು ದೃಡಪಡಿಸಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.
ಡೆತ್ ನೋಟ್ ಬರೆದು ಸಾವಿಗೆ ಶರಣಾದ ವಿದ್ಯಾರ್ಥಿ. ಡೆತ್ ನೋಟ್ ನಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದು ನೇಣಿಗೆ ಶರಣಾದ ಬಾಲಕ.