ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಕುರ್ಲಾ- ಕಯಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.
ಕೇರಳದ ಪೊದಿಯಮ್ಮ ಡೆನಿಲ್ ಎಂಬವರು ಗಂಡ ಹಾಗೂ ಮಗನೊಂದಿಗೆ ಡಿ. 15ರಂದು ಕೇರಳದ ಕಯಾಕುಲಂಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಡಿ. 16ರಂದು 2.30 ಮುಂಜಾನೆ ರೈಲು ಉಡುಪಿ ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಸುಮಾರು 30 ವರ್ಷ ಪ್ರಾಯದ ಯುವಕ ಪಿರ್ಯಾದಿದಾರರ ವ್ಯಾನಿಟಿ ಬ್ಯಾಗ್ ಅನ್ನು ಸುಲಿಗೆ ಮಾಡಿಕೊಂಡು, ರೈಲಿನ ಕೋಚಿನ ಎಡ ಭಾಗದ ಬಾಗಿಲಿನಿಂದ ಪರಾರಿಯಾಗಿದ್ದಾನೆ.
ಕಳವಾದ ಬ್ಯಾಗ್ ನಲ್ಲಿ ಚಿನ್ನದ ನೆಕ್ಲೀಸ್ ಚೈನ್, ಚಿನ್ನದ ಬಳೆ, ಎರಡು ಮೊಬೈಲ್, 15 ಸಾವಿರ ನಗದು ಸಹಿತ ಒಟ್ಟು ಅಂದಾಜು ಮೌಲ್ಯ 7 ಲಕ್ಷ ರೂಪಾಯಿ ಸೊತ್ತುಗಳು ಕಳವು ಆಗಿದೆ. ಈ ಪ್ರಕರಣ ಕೇರಳ ರಾಜ್ಯದ ಕಣ್ಣೂರು ರೈಲ್ವೇ ಪೊಲೀಸ್ ಠಾಣೆಯಿಂದ ಮಣಿಪಾಲ ಠಾಣೆಗೆ ವರ್ಗಾವಣೆಗೊಂಡಿದೆ.