ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ: ಪ್ರಶಾಂತ್ ಕುಂದಾಪುರಗೆ ಮೂರು ಚಿನ್ನದ ಪದಕ; ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಿತ್ರದುರ್ಗ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯು ಡಿ. 11 ಮತ್ತು 12 ರಂದು ಚಿತ್ರದುರ್ಗದಲ್ಲಿ ಆಯೋಜಿಸಿದ “40ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ- 2021” ದಲ್ಲಿ ಭಾಗವಹಿಸಿದ ಪ್ರಶಾಂತ್ ಕುಂದಾಪುರ ಅವರು ತ್ರಿಬಲ್ ಜಂಪ್ ನಲ್ಲಿ ಚಿನ್ನದ ಪದಕ, ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಹಾಗೂ 400 ಮೀ. ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಫೆಬ್ರುವರಿ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಾಂತ್ ಕರ್ನಾಟಕ ತಂಡ ಪ್ರತಿನಿಧಿಯಾಗಿ ಭಾಗವಹಿಸುವರು.