ಕಾರ್ಕಳ: ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡುವವರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲೂ ಖಡ್ಗ (ಆಯುಧ) ವನ್ನು ಇಟ್ಟುಕೊಳ್ಳಬೇಕು. ಖಡ್ಗದ ಮೂಲಕ ಗೋಕಳ್ಳರಿಗೆ ಉತ್ತರ ಕೊಡಬೇಕು. ಗೋರಕ್ಷಣೆಗಾಗಿ ಹಿಂದೂಗಳು ಈ ಕಾರ್ಯ ಮಾಡಲೇ ಬೇಕಾಗಿದೆ ಎಂದು ಸಾಧ್ವಿ ಸರಸ್ವತಿ ಹೇಳಿದರು.
ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳದ ವತಿಯಿಂದ ಕಾರ್ಕಳದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸೈನಿಕರ ಅವಹೇಳನ ಮಾಡುವ ದ್ರೋಹಿಗಳ ಮಟ್ಟಹಾಕಬೇಕಿದೆ. ಟಿಪ್ಪು ಸುಲ್ತಾನ್ ಪೂಜಿಸುವ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ದೂರ ಇಡಬೇಕು. ಆ ಮೂಲಕ ದೇಶದ ಸಂಸ್ಕೃತಿಯನ್ನು ಗೌರವಿಸುವ ಸರಕಾರವನ್ನು ಅಧಿಕಾರಕ್ಕೆ ತರಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದು ಲವ್ ಜಿಹಾದ್ ಅನ್ನು ಮಟ್ಟಹಾಕಬೇಕು ಎಂದರು.
ಗೌರಿ ಗದ್ದೆ ದತ್ತಾಶ್ರಮದ ವಿನಯ ಗುರೂಜಿ ಮಾತನಾಡಿ, ಹಿಂದೂ ಧರ್ಮ ಉಳಿಸಿ ಬೆಳೆಸುವಲ್ಲಿ ಸಂಘದ ಪಾತ್ರ ಮಹತ್ವದಾಗಿದೆ. ಕಲಿ ಕಲ್ಮಶ ತೊಳೆಯುವ ಕಾರ್ಕಳವಾಗಲಿ, ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು ಗೋಮಾತೆ ವಿರುದ್ಧ ಹೋರಾಡುವ ಭಜರಂಗದಳದ ಭಕ್ತರ ಮೇಲಿನ ಕೇಸ್ ನ್ನು ರದ್ದುಗೊಳಿಸಲು ಸಹಿಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇನೆ ಎಂದು ಹೇಳಿದರು.
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಯನ್ನು ರಕ್ಷಿಸುತ್ತಿರುವ ಸಂಘ ಕಾರ್ಯಕರ್ತರ ಅನನ್ಯ ಸೇವೆಯಿಂದ ತಲೆ ಎತ್ತಿ ಬಾಳುತ್ತಿದ್ದೇವೆ. ದೇಗುಲ, ಗೋಮಾತೆಯನ್ನು ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಮಾಡೋಣ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಹಿಂದೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಆನೆಗೊಂದಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ, ಕರ್ನಾಟಕ ವಿಶ್ವ ಹಿಂದೂ ಪರಿಷತ್ ನ ಎಂ. ಬಿಪುರಾಣಿಕ್, ಬೋಳ ಶ್ರಿನಿವಾಸ ಕಾಮತ್,
ಕಡ್ತಲ ವಿಶ್ವನಾಥ ಪೂಜಾರಿ, ಸುವೃತ್ ಕುಮಾರ್, ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದ ಮೊಕ್ತೇಸರ ಅಶೋಕ್ ನಾಯಕ್ ಹಿರ್ಗಾನ, ಮಹೇಶ್ ಶೆಟ್ಟಿ ಕುಡುಪುಲಾಜೆ, ಶರತ್ ಹೆಗ್ಡೆ ಬೆಳ್ಮಣ್ಣು, ಸುಂದರ್ ಬಿ ಹೊಸ್ಮಾರು , ಸುನೀಲ್ ಕೆ.ಆರ್ , ಭುಜಂಗ ಕುಲಾಲ್ , ಸುರೇಖ ರಾಜ್ , ವಿಷ್ಣುಮೂರ್ತಿ ಆಚಾರ್ಯ, ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.
ಚೇತನ್ ಪೆರಲ್ಕೆ ಸ್ವಾಗತಿಸಿದರು.