ಮಣಿಪಾಲ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ 80 ಬಡಗಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಶ್ರೇಯಸ್, ಪೆಮಿಸ್ಟನ್, ಚೈತನ್ಯ ಎಸ್. ಕುಂದರ್ ಮತ್ತು ಮೊಹಮ್ಮದ್ ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ.
ನ.24ರಂದು ಮಣಿಪಾಲ ಠಾಣೆಯ ಎಎಸ್ಐ ಶೀನ ಸಾಲಿಯಾನ್, ಪಿಎಸ್ಐ ವಿನಯ್, ಸಿಬ್ಬಂದಿ ಸಂಗಮೇಶ್ ಮತ್ತು ಅಣ್ಣಪ್ಪ ಅವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನೇತಾಜಿನಗರದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಶ್ರೇಯಸ್, ಪೆಮಿಸ್ಟನ್, ಚೈತನ್ಯ ಮತ್ತು ಮೊಹಮ್ಮದ್ ರಜಾಕ್ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ವಿಚಾರಣೆ ನಡೆಸಿದಾಗ ಅವರ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿತ್ತು. ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ ಕಾರಣ ನಾಲ್ವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅದರ ವರದಿ ನ.30ರಂದು ಬಂದಿದ್ದು, ನಾಲ್ವರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












