ಓಮ್ರಿಕಾನ್ ವೈರಸ್ ಭೀತಿ; ರಾಜ್ಯಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ

ಬೆಂಗಳೂರು: ಸೌತ್ ಆಫ್ರಿಕಾ ಸಹಿತ ಜಗತ್ತಿನ ಕೆಲವೊಂದು ದೇಶಗಳಲ್ಲಿ ಕೊರೊನಾ ಹೊಸ ತಳಿ B.1.1.529 ಓಮ್ರಿಕಾನ್ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್​ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಕೆಲವು ದಿನಗಳಿಂದ ಸೌತ್ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನಾದಲ್ಲಿ ಹೊಸ ತಳಿ B.1.1.529 , ಓಮ್ರಿಕಾನ್​​ ಕಂಡುಬಂದಿದೆ. ಇದಕ್ಕೂ ಮೊದಲು ಕೊರೊನಾ ರೂಪಾಂತರಿ ಡೆಲ್ಟಾ 9 ತಿಂಗಳಿಂದ ಇತ್ತು. ಆದ್ರೆ ಇದು ಅದಕ್ಕಿಂತ ತೀವ್ರವಾದ ವೈರಸ್ ಅಂತಾ ಹೇಳಲಾಗ್ತಿದೆ. ರಾಜ್ಯದಲ್ಲಿ ಈ ವಿಚಾರವಾಗಿ ಆತಂಕ ಬೇಡ ಆದ್ರೆ ಜಾಗೃತೆ ಇರಲಿ ಎಂದರು.

ಇನ್ನು ಹೊರ ದೇಶಗಳಿಂದ ಆಗಮಿಸುವವರಿಗೆ ಮತ್ತೆ ತೀವ್ರ ತಪಾಸಣೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಅವರ ರಿಪೋರ್ಟ್​ ನೆಗೆಟಿವ್​ ಬರೋವರೆಗೂ ಅವರನ್ನು ಹೊರಗಡೆ ಬಿಡೋದಿಲ್ಲ. ನೆಗೆಟಿವ್​ ಬಂದ ನಂತರ ಅವರು 7 ದಿನ ಕ್ವಾರಂಟೀನ್​ನಲ್ಲಿ ಇರಬೇಕು ಎಂದಿದ್ದಾರೆ. ಇದರ ಗುಣಲಕ್ಷಣಗಳು ಡೆಲ್ಟಾಗೂ ಹೋಲಿಕೆಯಿವೆ. ಆದ್ರೆ ಇದು ಅತಿ ವೇಗವಾಗಿ ಹರಡುತ್ತದೆ ಎಂದು ಮಾಹಿತಿಯಿದೆ ಎಂದರು.