ಕರಾವಳಿ ಜಿಲ್ಲೆಗಳಿಗೆ ಸೈಕ್ಲೋನ್ ಭೀತಿ.!

ಬೆಂಗಳೂರು: ನವೆಂಬರ್ 26ರಂದು ಚೆನ್ನೈಗೆ ಮತ್ತೊಂದು ಸೈಕ್ಲೋನ್ ಚಂಡಮಾರುತ ಅಪ್ಪಳಿಸಿದ್ದು, ಇದರ ಪ್ರಭಾವ ಕರ್ನಾಟಕ ರಾಜ್ಯದ ಮೇಲೂ ಬೀರಲಿದೆ. ಮೈಸೂರು ಭಾಗದಿಂದ ಉಡುಪಿವರೆಗೂ ಸೈಕ್ಲೋನ್ ಪ್ರಭಾವ ಇರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸೈಕ್ಲೋನ್ ಹಿನ್ನೆಲೆಯಲ್ಲಿ ನ.26ರಿಂದ 28ರವರೆಗೆ ಮುನ್ನೆಚ್ಚರಿಕೆ ಅಗತ್ಯವಾಗಿದ್ದು, ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಇಂದು ಸಚಿವರು ತಿಳಿಸಿದರು.