ಉಡುಪಿ: ಸಿಟಿ ಬಸ್ ನಿಲ್ದಾಣ ಬಳಿಯ ರಾಜ್ ಟವರ್ ನ ಹಿಂದುಗಡೆ ಶಾಪ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಇಂದು ಸಂಜೆ ನಡೆದಿದೆ.
ಗೋದಾಮಿನಲ್ಲಿ ಹಳೆಯ ಗುಜುರಿ ವಸ್ತುಗಳನ್ನು ತುಂಬಿಸಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಟಯರ್, ಸೀಟು ಕವರ್ ಗಳು ಸುಟ್ಟು ಹೋಗಿವೆ.
ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದೆ. ಎರಡು ಅಗ್ನಿಶಾಮಕ ವಾಹನಗಳಲ್ಲಿ ಅಗ್ನಿ ನಂದಿಸುವ ಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ












