ಉಡುಪಿ: ಅಂಧಕಾರದಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವ ಸಂಕೇತ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಹಾಗೂ ಹಿಂದೂ ಧರ್ಮದ ಜಾತಿ, ಜಾತಿಗಳ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನವಾಗಿ “ತುಡರ್” ಕಾರ್ಯಕ್ರಮವು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಅಂಬಲಪಾಡಿ ಕಪ್ಪೆಟ್ಟು ಪರಿಸರದ ಗಾಂಧಿನಗರದ ಮಾಲತಿ ಅವರ ನಿವಾಸದಲ್ಲಿ ನಡೆಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಯಾ ಕಾಮತ್ ಮಣಿಪಾಲ ತಂಡದ ಜೊತೆ ಸೇರಿ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಕೊರಗ ಕಾಲನಿಯ ವಿವಿಧ ಕುಟುಂಬಗಳ 6 ಮಂದಿ ಮಹಿಳೆಯರಿಗೆ ಸೀರೆ ಮತ್ತು ಸಿಹಿ ತಿಂಡಿ ಪೊಟ್ಟಣಗಳನ್ನು ವಿತರಿಸಲಾಯಿತು.
ಪಂಕ್ತಿ ಭೇದ ತೊಡೆದುಹಾಕುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಮೂಹಿಕವಾಗಿ ಉಪಹಾರವನ್ನು ಸೇವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಅಶ್ವಿನಿ ಶೆಟ್ಟಿ, ಶಶಿಕಲಾ, ಮಾಲತಿ ಶ್ರಿಯಾನ್, ಶೋಭಾ ಶೆಟ್ಟಿ, ಸರೋಜ ದೇವಾಡಿಗ, ರಮಶೆಟ್ಟಿ,ಪೂರ್ಣಿಮ ರತ್ನಾಕರ್, ಇಂದಿರಾ, ಸುಮ ಶೆಟ್ಟಿ, ದಯಾಶಿನಿ, ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯರುಗಳು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.















