ಆಟೋ ಪ್ರಯಾಣ ದರ ₹5 ಹೆಚ್ಚಳ: ಡಿಸೆಂಬರ್ 1ರಿಂದ ನೂತನ ದರ ಜಾರಿ

ಬೆಂಗಳೂರು: ಆಟೋ ಚಾಲಕರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿದ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಬೆಂಗಳೂರು ನಗರದಲ್ಲಿ ಆಟೊ ಪ್ರಯಾಣ ದರವನ್ನು ₹ 5 ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

ಸದ್ಯ 1.9 ಕಿ.ಮೀ ಸಂಚಾರಕ್ಕೆ ₹ 25 ದರವಿತ್ತು. ಇದೀಗ 2 ಕಿ.ಮೀ ಸಂಚಾರಕ್ಕೆ ₹ 30 ನಿಗದಿ ಮಾಡಲಾಗಿದೆ. ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪರಿಷ್ಕೃತ ದರ ಹೀಗಿದೆ
2 ಕಿ.ಮೀ.ಗೆ ₹30 (ಮೂರು ಜನ ಪ್ರಯಾಣಿಕರು)
2 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ ₹15.
ಕಾಯುವಿಕೆ ದರ:
ಮೊದಲ ಐದು ನಿಮಿಷ ಉಚಿತ
ನಂತರ ಪ್ರತಿ ಹದಿನೈದು ನಿಮಿಷಕ್ಕೆ ₹5.
ಲಗೇಜು ದರ:
ಮೊದಲ 20ಕೆ.ಜಿ.ಗೆ ಉಚಿತ
20 ಕೆ.ಜಿ. ನಂತರ ಪ್ರತಿ 20 ಕೆ.ಜಿ.ಗೆ ₹5
ರಾತ್ರಿ ವೇಳೆ ದರ:
ರಾತ್ರಿ 10ಗಂಟೆಯಿಂದ ನಸುಕಿನ 5ಗಂಟೆಯವರೆಗೆ
ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು‌

ನಿಗದಿತ ಪರಿಷ್ಕೃತ ದರ ಪಟ್ಟಿಯನ್ನು ಚಾಲಕರು ತಮ್ಮ ಆಟೊದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರಗಳಿಗೆ ತಕ್ಕಂತೆ ಮೀಟರ್‌ಗಳ ಅಂಕಿಗಳನ್ನು ಮಾರ್ಪಡಿಸಿ 2022ರ ಫೆಬ್ರವರಿ 28ರೊಳಗೆ (90 ದಿನಗಳು) ಪುನಃ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.