ಉಡುಪಿ: ವಿವಾಹಿತ ಮಹಿಳೆಯನ್ನು ಅಪಹರಣ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ವಿಶ್ವಹಿಂದು ಪರಿಷತ್ – ಭಜರಂಗದಳದ ಸಂಚಾಲಕ ವಿರುದ್ಧ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಬಜರಂಗದಳದ ಬಜಗೋಳಿ ವಲಯ ಸಹ ಸಂಚಾಲಕ ಸಂದೀಪ್ ಆಚಾರ್ಯ ವಿರುದ್ಧ ದೂರು ದಾಖಲಾಗಿದೆ.
ಈತ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿ ವಾಸವಾಗಿರುವ ಭಜರಂಗದಳದ ಕಾರ್ಯಕರ್ತ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಹಿಳೆಯ ಸಹೋದರ ನೀಡಿದ ದೂರಿನಂತೆ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.












