ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಆಯ್ಕೆ

ಮೂಡುಬಿದಿರೆ: ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ.

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇಂದು (ಅ. 30) ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಇತರ ಪದಾಧಿಕಾರಿಗಳು:
ಪ್ರಧಾನ ಕಾರ್ಯದರ್ಶಿ- ನಾರಾವಿ ರಕ್ಷಿತ್ ಜೈನ್, ಉಪಾಧ್ಯಕ್ಷ- ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ, ಪುತ್ತೂರು ಚಂದ್ರಹಾಸ ಶೆಟ್ಟಿ, ಬೆಳ್ಳಿಪಾಡಿ ಕೈಪಾ ಕೇಶವ ಭಂಡಾರಿ, ಜಪ್ಪು ಮನ್ಕುತೋಟ ಗುತ್ತು ಅನಿಲ್ ಶೆಟ್ಟಿ, ಕೊಳಕೆ ಇರ್ವತ್ತೂರು ಉದಯ್ ಕೋಟ್ಯಾನ್, ಕೋಶಾಧಿಕಾರಿ- ಮೂಡುಬಿದಿರೆ ನ್ಯೂ ಪಡಿವಾಲ್ಸ್ ಹರ್ಷವರ್ಧನ್ ಪಡಿವಾಲ್.

ಓಟಗಾರರ ಪರವಾಗಿ- ಕೊಳಕೆ ಇರ್ವತ್ತೂರು ಆನಂದ್, ಜೊತೆ ಕಾರ್ಯದರ್ಶಿ-  ಸುದೇಶ್ ಕುಮಾರ್ ಅರಿಗ, ಸಿದ್ಧಕಟ್ಟೆ ಸಂದೀಪ್ ಶೆಟ್ಟಿ, ಕೌಡೂರು ಬೀಡು ಯತೀಶ್ ಭಂಡಾರಿ, ಸರಪಾಡಿ ಧನಂಜಯ ಶೆಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ಇರುವೈಲ್ ದೊಡ್ಡಗುತ್ತು ಜಗದೀಶ್ ಶೆಟ್ಟಿ ಅವರು‌ ನೇಮಕಗೊಂಡಿದ್ದಾರೆ ಎಂದು ಕಂಬಳ ಸಮಿತಿ ತಿಳಿಸಿದೆ.