ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರ ಸಂಘದ ವಾರ್ಷಿಕ ಮಹಾಸಭೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಐದು ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯದ ಸಂಬಂಧಿಸಿ ಇಬ್ಬರಿಗೆ ಧನಸಹಾಯ ನೀಡಲಾಯಿತು.
ವಿನಯ ಭಟ್ ಕಬ್ಯಾಡಿ ಸಂಘಟನೆ ಅನಿವಾರ್ಯತೆಯ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಸಂಘ ಹಾಗೂ ಕೇಕ್ ವಾಲಾ ಕುಂದಾಪುರ ವತಿಯಿಂದ ಕಿಟ್ ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ವಾಲ್ಟರ್ ಸಲ್ದಾನ ಉಡುಪಿ, ಅಧ್ಯಕ್ಷರಾಗಿ ವಿಶ್ವನಾಥ್ ಕುಲಾಲ್ ಬಿದ್ಕಲ್ ಕಟ್ಟೆ, ಉಪಾಧ್ಯಕ್ಷರಾಗಿ ಸುದೇವ ಶೆಟ್ಟಿ ಕೋಟೇಶ್ವರ, ಹೆರಾಲ್ಡ್ ಡಿಸೋಜ ಉಡುಪಿ, ಶ್ರೀಶನ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ಬ್ರಹ್ಮಾವರ, ಜತೆ ಕಾರ್ಯದರ್ಶಿ ಗಣಪತಿ ಮರಕಾಲ ಉಡುಪಿ, ಕೋಶಾಧಿಕಾರಿ ಶಶಿಕಾಂತ ನಾಯಕ್ ಸಂತೆಕಟ್ಟೆ, ಜತೆ ಕೋಶಾಧಿಕಾರಿ ಕೃಷ್ಣ ಪೂಜಾರಿ ಕೊಕ್ಕರ್ಣೆ, ಸಂಘಟನ ಕಾರ್ಯದರ್ಶಿ ದಿವಾಕರ್ ಸನಿಲ್ ಉಡುಪಿ, ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ಕುಂದಾಪುರ ಅವರು ಆಯ್ಕೆಯಾದರು.
ಆಡಳಿತ ಮಂಡಳಿಯ ಸದಸ್ಯರಾಗಿ ವಿಶ್ವನಾಥ್ ಜಿ., ಅನಂತಕೃಷ್ಣ ಶೆಣೈ ಕಾರ್ಕಳ, ಪ್ರಶಾಂತ್ ಪೂಜಾರಿ ಬೈಂದೂರು, ದುರ್ಗಾಪ್ರಸಾದ್ ಹಂಗಾರಕಟ್ಟೆ ಸಾಸ್ತಾನ, ಕೃಷ್ಣ ನಾಯ್ಕ್ ಹೆಬ್ರಿ, ಶಶಿಧರ್ ಗಾಣಿಗ ಐರೋಡಿ, ರಿತೇಶ್ ಸುವರ್ಣ ಮೂಡುಬೆಳ್ಳೆ, ಹಸನ್ ಬೆಳ್ಮಣ್, ಅಮೃತ್ ಕುಂದಾಪುರ, ಸಂದೀಪ್ ಉಡುಪಿ ನೇಮಕಗೊಂಡರು.
ಸುದೇವ ಶೆಟ್ಟಿ ಸ್ವಾಗತಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಕುಲಾಲ್ ವರದಿ ವಾಚಿಸಿದರು. ಸತ್ಯಪ್ರಸಾದ್ ಶೆಣೈ ಲೆಕ್ಕಪತ್ರ ಮಂಡಿಸಿದರು. ದಿವಾಕರ ಸನಿಲ್ ವಂದಿಸಿದರು. ಸಂಘದ ಬೈಲಾ ತಿದ್ದುಪಡಿಗಳ ಬಗ್ಗೆ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಕೇಕ್ ವಾಲಾ, ಲಿಲ್ಲಿ ದಾಲ್ದ, ಪ್ರಸಿದ್ದಿ ಸೋಲಾರ್, ಅರವಿಂದ ಮೋಟರ್ಸ್ ಸಹಯೋಗ ನೀಡಿದರು.