ಹೈದರಾಬಾದ್: ಒಂದು ಮೊಟ್ಟೆ ಮಹಿಳೆಯೊಬ್ಬರ ಪ್ರಾಣ ತೆಗೆದ ದುರಂತ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ.
ನೇರಳಪಲ್ಲಿಯ ನೀಲಮ್ಮ ಮೃತ ದುರ್ದೈವಿ. ಇವರು ಊಟ ಮಾಡುತ್ತಿದ್ದ ವೇಳೆ ಬೇಯಿಸಿದ ಮೊಟ್ಟೆ ತಿನ್ನಲು ಹೋಗಿದ್ದಾರೆ. ಆಗ ಅದು ಗಂಟಲಿನಲ್ಲಿ ಸಿಲುಕಿಕೊಂಡು ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ನೀಲಮ್ಮ ಊಟ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾರೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿದೆ. ಗಂಟಲಲ್ಲಿ ಮೊಟ್ಟೆ ಸಿಲುಕಿಕೊಂಡಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಈ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.