ಗಾಯಗೊಂಡಿದ್ದ ಹೆಬ್ಬಾವನ್ನು ರಕ್ಷಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ ಸುಜಿತ್ ನೀರೆ

ಕಾರ್ಕಳ: ನೀರೆ ತಂತ್ರಿಬೆಟ್ಟು ರಮೇಶ್ ಕಲ್ಲೊಟ್ಟೆಯವರ ಭತ್ತದ ಗದ್ದೆಯಲ್ಲಿ ಬೃಹದಾಕಾರದ ಹೆಬ್ಬಾವು ಪತ್ತೆಯಾಗಿದೆ.

ಹೆಬ್ಬಾವು ಬಲೆಯಲ್ಲಿ ಸಿಲುಕಿ ಗಾಯಗೊಂಡಿದ್ದು, ಆಹಾರಕ್ಕಾಗಿ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡು ಒದ್ದಾಡುತ್ತಿತ್ತು.
ಈ ಬಗ್ಗೆ ಬೈಲೂರು ವಲಯ ಅರಣ್ಯಾಧಿಕಾರಿ ಜಯರಾಮ್ ಅವರಿಗೆ ಮಾಡಲಾಯಿತು‌. ಅವರು ತಕ್ಷಣ ವನಪಾಲಕ ಶ್ರೀಧರ್ ಅವರ ಮೂಲಕ ಆಪದ್ಬಾಂಧವ ನೀರೆ ಸುಜಿತ್ ಅವರನ್ನು ಕಳುಹಿಸಿಕೊಟ್ಟರು.

ನೀರೆ ಸುಜಿತ್ ಹಾಗೂ ಸ್ನೇಹಿತರ ಸಹಾಯದಿಂದ ಭತ್ತದ ಗದ್ದೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹೆಬ್ಬಾವನ್ನು ರಕ್ಷಿಸಿ, ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಲೆಯನ್ನು ಬಿಡಿಸಿ ಸುರಕ್ಷಿತವಾಗಿ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಲಾಯಿತು. ಇದೀಗ ಹೆಬ್ಬಾವು ಚೇತರಿಸಿಕೊಂಡಿದೆ ಎಂದು ತಿಳಿದುಬಂದಿದೆ.