ಕುಂದಾಪುರ: ಅನಧಿಕೃತ ಕ್ಲಿನಿಕ್‌ಗೆ ಬೀಗಜಡಿದ ಅಧಿಕಾರಿಗಳು

ಕುಂದಾಪುರ: ಕುಂದಾಪುರ ತಾಲೂಕಿನ ಬಂಟ್ವಾಡಿಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೂಕಾಂಬಿಕಾ ಖಾಸಗಿ ಕ್ಲಿನಿಕ್‌ ಅನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಾ ಪ್ರಾಧಿಕಾರ ಉಡುಪಿ ಇದರ ಅಡಿಯಲ್ಲಿ ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ತನಿಖೆ ನಡೆಸಿ ಬೀಗ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆ.ಪಿ.ಎಮ್.ಇ ನೋಡಲ್ ಅಧಿಕಾರಿ ಡಾ. ರಾಮ್ ರಾವ್.ಕೆ, ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರತಾಪ್, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಡಾ ಅಶೋಕ್, ಕೆಪಿಎಮ್‌ಇ ವಿಷಯ ನಿರ್ವಾಹಕರಾದ ಸುಬ್ರಮಣ್ಯ ಶೇರಿಗಾರ್ ಹಾಗೂ ಮತ್ತಿತರರು ಇದ್ದರು.