ಸೆಪ್ಟೆಂಬರ್ 25 ಎಂದರೆ ವಿಶ್ವದಾದ್ಯಂತ ಫಾರ್ಮಸಿಸ್ಟ್ ಡೇ ವಿಶೇಷ. ೨೦೦೯ ರಲ್ಲಿ ಇಂಟರ್ ನ್ಯಾಷನಲ್ ಫಾರ್ಮಸುಟಿಕಲ್ ಫೆಡರೇಶನ್ ಆದೇಶದಂತೆ ಈ ದಿನವನ್ನು ಆಛರಿಸಲಾಗುತ್ತಿದೆ.
ಫಾರ್ಮಸಿ ವಿಭಾಗ, ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗ. ಫಾರ್ಮಸಿ ವಿಭಾಗದ ತಜ್ಞರು ತಮ್ಮ ವೃತ್ತಿ ಜೀವನದ ಏಳುಬೀಳುಗಳನ್ನು ಪರಾಮರ್ಶಿಸಿ, ಈ ದಿನಕ್ಕೆ ಏನಾದರೊಂದು ಹೊಸ ತಿರುಳನ್ನು ಇಟ್ಟುಕೊಂಡು ಜನರಲ್ಲಿ ಆರೋಗ್ಯದ ಕುರಿತು ಕಾಳಜಿ ಮತ್ತು ಕಳಕಳಿ ಮೂಡಿಸುತ್ತಾರೆ.
ಕಾಲಕಾಲಕ್ಕೆ ಯಾವುದೇ ಸನ್ನಿವೇಶವಿರಲಿ ಜನರಿಗೆ ಕ್ಲಪ್ತ ಸಮಯದಲ್ಲಿ ದೇವರಂತೆ ಔಷಧಿಗಳನ್ನು ಪೂರೈಸುವ ಫಾರ್ಮಸಿಸ್ಟ್ ಗಳಿಗೆ ನಮ್ಮ ಕಡೆಯಿಂದ ಶುಭ ಹಾರೈಕೆಗಳು.