ಪಾಕೆಟ್ ಗಾತ್ರದ ಹಾರ್ಡ್ ಡಿಸ್ಕ್ ಬಿಡುಗಡೆಗೊಳಿಸಿದ ‘ವೆಸ್ಟರ್ನ್ ಡಿಜಿಟಲ್’

ಬೆಂಗಳೂರು: ‘ವೆಸ್ಟರ್ನ್ ಡಿಜಿಟಲ್’ ಪಾಕೆಟ್ ಗಾತ್ರದ ನೂತನ ಸರಣಿಯ ಹಾರ್ಡ್ ಡಿಸ್ಕ್ ಅನ್ನು ಬಿಡುಗಡೆ ಮಾಡಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ವೆಸ್ಟರ್ನ್ ಡಿಜಿಟಲ್ ನೂತನ ಹಾರ್ಡ್‌ಡಿಸ್ಕ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ವೆಸ್ಟರ್ನ್ ಡಿಜಿಟಲ್ ಎಲಿಮೆಂಟ್ಸ್ ಎಸ್‌ಇ ಎಸ್‌ಎಸ್‌ಡಿ ಮಾದರಿ ಅತ್ಯಂತ ಚಿಕ್ಕ ಗಾತ್ರದಲ್ಲಿದ್ದು, 480 GB ಸಾಮರ್ಥ್ಯದಿಂದ ತೊಡಗಿ, 2 ಟಿಬಿ ವರೆಗಿನ ಸ್ಟೋರೇಜ್ ಹೊಂದಿದೆ.

ನೂತನ ಸರಣಿಯ ವೆಸ್ಟರ್ನ್ ಡಿಜಿಟಲ್ ಹಾರ್ಡ್ ಡಿಸ್ಕ್, 27 ಗ್ರಾಂ ತೂಕ ಹೊಂದಿದ್ದು, ಆರಂಭಿಕ ಆವೃತ್ತಿ ದರ ₹6,499 ಮತ್ತು 2 ಟಿಬಿ ಮಾದರಿಗೆ ₹19,659 ದರದವರೆಗೆ ಇದೆ. 1 ಟಿಬಿ ಮಾದರಿಗೆ ₹9,839 ದರ ನಿಗದಿಪಡಿಸಲಾಗಿದೆ.

ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್, ಮತ್ತಿತರ ಅವಶ್ಯಕತೆಗಳಿಗೆ ಸಂಗ್ರಹಣಾ ಸಾಮರ್ಥ್ಯ ಒದಗಿಸಲಿದ್ದು, ಯುಎಸ್‌ಬಿ 3.0 ಮತ್ತು 400Mbps ವೇಗದ ವರೆಗಿನ ಡಾಟಾ ವರ್ಗಾವಣೆ ವೇಗ ಇದರ ವಿಶೇಷತೆಯಾಗಿದೆ.