ಕಾರ್ಕಳ: ನಗರದ ಜೋಡುರಸ್ತೆಯ ಪ್ರೈಮ್ ಮಾಲ್‌ನ ದ್ವೀತಿಯ ಮಹಡಿಯಲ್ಲಿ ಕಾರ್ಕಳದ ಪ್ರಸಿದ್ಧ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯ ನೂತನ ಪೂರ್ಣಿಮಾ ಲೈಫ್ ಸ್ಟೈಲ್ ಒಳಾಂಗಣ ವಿನ್ಯಾಸಕ್ಕೆ ಚಾಲನೆ ನೀಡಲಾಯಿತು.
ಚಾಲನೆ ನೀಡಿ ಮಾತನಾಡಿದ ರಾಜ್ಯ ಪ್ರಶಸ್ತಿ ವಿಜೇತ, ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯ್ ಕುಮಾರ್ ಅವರು, ರವಿಪ್ರಕಾಶ್ ಪ್ರಭು ಅವರ ಯೋಜನೆಯಿಂದ ಬಹಳ ಜನರಿಗೆ ಉದ್ಯೋಗ ಸಿಗಲಿದೆ. ಆ ಮೂಲಕ ನೂರಾರು ಮನೆಗಳು ಬೆಳಗಲಿದೆ ಎಂದರು.
ರಾಜಾಪುರ ಸಾರಸ್ವತ ಕ್ರೇಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಮಾತನಾಡಿ, ಅಭಿವೃದ್ಧಿಗೊಳ್ಳುತ್ತಿರುವ ಜೋಡುರಸ್ತೆಯಲ್ಲಿ ಇಂತಹ ಸಂಸ್ಥೆ ಅವಶ್ಯವಿದೆ ಎಂದರು.
ಕಾರ್ಕಳ ಹಿರಿಯಂಗಡಿ ಶಿವತಿಕೆರೆ ದೇವಾಸ್ಥಾನದ ಧರ್ಮದರ್ಶಿ, ಕುಂದಾಪುರ ಸಹಾನ ಗ್ರೂಪ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಾತನಾಡಿ, ಕಾರ್ಕಳದ ಉದ್ಯಮಿಗಳು ಕಾರ್ಕಳ ತಾಲೂಕಿನಲ್ಲಿಯೇ ಹಲವು ಉದ್ಯಮಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗವನ್ನು ದೊರಕಿಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ಣಿಮಾ ಸಮೂಹ ಸಂಸ್ಥೆಯ ಮಾಲೀಕ ರವಿಪ್ರಕಾಶ್ ಪ್ರಭು ಮಾತನಾಡಿ, ಸಂತೃಪ್ತ ಗ್ರಾಹಕರೇ ಶಾಶ್ವತ ಆಸ್ತಿ, ಗ್ರಾಹಕರ ಆಶೀರ್ವಾದವೇ ನಮಗೆ ಶ್ರೀ ರಕ್ಷೆ ಎಂಬ ಧ್ಯೇಯೋವಾಕ್ಯದಲ್ಲಿ ಆರಂಭಗೊಂಡ ಪೂರ್ಣಿಮಾ ಸಮೂಹ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ. ಜೊತೆಗೆ ಸಾಮಾಜಿಕ ಚಟುವಿಟಿಕೆಯಲ್ಲಿ ತೊಡಗಿಸಿದೆ ಎಂದರು.
ಪೂರ್ಣಿಮಾ ಲೈಫ್ ಸ್ಟ್ರೈಲ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಟ್ಟೆ ಅಂಗಡಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಲೇಡೀಸ್ ಬ್ಯೂಟಿ ಸ್ಪಾ, ಅಲಂಕಾರಿಕ ವಸ್ತುಗಳನ್ನು ಒಳಗೊಂಡ ಕೊಸ್‌ಮೆಟಿಕ್ ಶಾಪ್, ಇಮಿಕೇಷನ್ ಜ್ಯುವೆಲ್ಲರಿ, ಬುರ್ಖ ಶಾಪ್, ಪಿಜ್ಜಾ ಬರ್ಗರ್ ಶಾಪ್, ಜ್ಯೂಸ್ ಸೆಂಟರ್, ಪುರುಷರು ಮಹಿಳೆಯರ ವಿಶೇಷ ವಿನ್ಯಾಸದ ಆಕರ್ಷಕ ಬ್ರ್ಯಾಂಡೆಡ್ ಮಳಿಗೆಯಾಗಿದೆ. ಎಲ್ಲವೂ ಹವಾನಿಯಂತ್ರಿತವಾಗಿದ್ದು, ಮಳಿಗೆಯನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ವಕೀಲ ಶೇಖರ್ ಮಡಿವಾಳ, ಪ್ರೈಮ್ ಮಾಲ್ ಮಾಲೀಕ ಮಹಾವೀರ್ ಹೆಗ್ಡೆ, ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಎಸ್. ಮರಬಳ್ಳಿ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಉದಯ್ ಎಸ್. ಕೊಟ್ಯಾನ್, ವಕೀಲ ಸುವೃತ್ ಕುಮಾರ್, ಉದ್ಯಮಿ ನಿತ್ಯಾನಂದ ಪೈ, ಸಚಿನ್ ಕೋಟ್ಯಾನ್, ಚೆನೈ ಅಮರ್ ಆರ್ಕಿಟೆಕ್ ಎಂಡ್ ಡಿಸೈನಿಂಗ್‌ನ ಸತೀಶ್ ಪಿಳೈ, ಮಾರುತಿ ಡಿಸೈನಿಂಗ್‌ನ ಆರ್. ಬಾಲಕೃಷ್ಣ, ಗೋವಿಂದ ರಾಜ್, ಪೂರ್ಣಿಮಾ ಸಂಸ್ಥೆಯ ಉಮನಾಥ್ ಪ್ರಭು, ಹರಿಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಕಿರಣ ರವಿಪ್ರಕಾಶ್ ಪ್ರಭು ಸ್ವಾಗತಿಸಿದರು.












