ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವುದ್ ಅಬೂಬಕರ್ ಅವರ ನೇತೃತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ಮತ್ತು ಪ್ಲಾಸ್ಟಿಕ್ ಸ್ವಚ್ಛತಾ ಸೇವಾ ಕಾರ್ಯಕ್ರಮ ಮಲ್ಪೆ ಬೀಚ್ ನ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಬಳಿ ನಡೆಯಿತು.

ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಮುಜಮ್ಮಿಲ್ ಅಹ್ಮದ್ ಬಾಬು
ಕಾಟನ್ ಕೈಚೀಲ ಕೊಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕರಾದ ಸಿರಾಜೂದ್ದೀನ್ ರವರು ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಉಡುಪಿಗಾಗಿ ಶುಭಹಾರೈಸಿದರು. ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ ಗುಂಡಿಬೈಲು ಮಾತನಾಡಿ, ಬಟ್ಟೆ ಚೀಲಗಳ ಮರು ಉಪಯೋಗ ಮತ್ತು ಪ್ಲಾಸ್ಟಿಕ್ ಚೀಲದ ಅಪಾಯವನ್ನು ವಿವರಿಸಿದರು.
ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಹರೀಶ್ ಶೆಟ್ಟಿ ಅಂಬಲ್ಪಾಡಿ ಪ್ಲಾಸ್ಟಿಕ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ರಾಜ್ಯ ಅ.ಸಂ.ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು, ಬಿಜೆಪಿ ಪಕ್ಷದ ಉಪಾಧ್ಯಕ್ಷೆ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಭಾರಿ ನಯನಾ ಗಣೇಶ್, ಮೋರ್ಚಾ ಉಪಾಧ್ಯಕ್ಷರುಗಳಾದ ಚಿರಂಜೀವಿ ಜೈನ್ ಅಜೆಕಾರು, ಮಹಮ್ಮದ್ ಅಪ್ಸರ್ ಉಚ್ಚಿಲ, ರುಡಾಲ್ಫ್ ಡಿಸೋಜ, ಅಬ್ದುಲ್ ಮುತ್ತಾಲಿ ವಂಡ್ಸೆ, ಜಿಲ್ಲಾ ಅ.ಸಂ.ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಆಲ್ವಿನ್ ಡಿಸೋಜ, ಅಸೀಫ್ ಶೇಕ್, ಕಾರ್ಯದರ್ಶಿ ಗ್ರೇಟ್ಟಾ ಮಸ್ಕರೇನಸ್, ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ಜೈನ್, ಶೀತಲ್ ಜೈನ್, ರೊನಾಲ್ಡ್ ನೊರೋನ್ಹ ಕಾರ್ಕಳ, ಕುಂದಾಪುರ ಮಂಡಲ ಮೋರ್ಚಾದ ಅಧ್ಯಕ್ಷ ಫಿರೋಜ್, ಉಡುಪಿ ಮಂಡಲ ಮೋರ್ಚಾದ ಅಧ್ಯಕ್ಷ ಜುನೈದ್, ಪ್ರ.ಕಾರ್ಯದರ್ಶಿ ಶೇಕ್ ಫಯಾಜ್ ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.
ಕಚೇರಿ ಕಾರ್ಯದರ್ಶಿ ಮೈಕಲ್ ಡಿಸೋಜ ಸ್ವಾಗತಿಸಿದರು. ಗಿಲ್ಬರ್ಟ್ ಬ್ರಗಾಂಜ ವಂದಿಸಿದರು.