ಕಾರ್ಕಳ: ಸಿಂಧೂರ ವಿದ್ಯಾರ್ಥಿ ವೇತನ ಕಾರ್ಯಕ್ರಮ 

ಕಾರ್ಕಳ: ಸಿಂಧೂರ ವಿದ್ಯಾರ್ಥಿ ವೇತನ ಕಾರ್ಯಕ್ರಮ  ಸಿಂಧೂರ ಕಲಾವಿದೆರ್ ಕಾರ್ಲ ಇವರು ಪ್ರತೀ ವರ್ಷ ಕೊಡುತ್ತಿರುವ ವಿದ್ಯಾರ್ಥಿ ವೇತನ ಕಾರ್ಯಕ್ರಮ ವು ಸೆಪ್ಟೆಂಬರ್ 19 ರಂದು ದೇವಿಕೃಪಾ ಇಂದಿರಾ ನಗರ ಪುಲ್ಕೇರಿ ಇಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಿಜಯ ಶೆಟ್ಟಿ ಕಾರ್ಕಳ ಇವರು ಸಿಂಧೂರ ಕಲಾವಿದರು ಜನರಿಗೆ ಮನರಂಜನೆ ನೀಡುವುದರೊಂದಿಗೆ ಸಮಾಜ ಮುಖಿಯಂತ ಉತ್ತಮ ಕೆಲಸಗಳನ್ನು ಮಾಡುತ್ತೀದ್ದು  ತುಂಬಾ ಸಂತೋಷ ದ ವಿಷಯ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಡದ ಸಂಚಾಲಕರಾದ  ಜೇರಾಲ್ಡ್ ಡಿಸಿಲ್ವ ಮಿಯ್ಯಾರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶೇಖ್ ಶಬ್ಬೀರ್ ಮಿಯ್ಯಾರು, ಸುಧಾಕರ ಪೂಜಾರಿ  ಪುಣೆ, ಅಶೋಕ್ ಪೊಸಲಾಯಿ,ತಂಡದ ಸಾರಥಿ ಲೀಲಾವತಿ ಪೊಸಲಾಯಿ, ಮತ್ತು ರವೀಂದ್ರ ಶಾಂತಿ ಪುಲ್ಕೇರಿ.ಮತ್ತು ತಂಡದ ಕಲಾವಿದರು ಉಪಸ್ಥಿತರಿದ್ದರು.

ಹಮೀದ್ ಮಿಯ್ಯಾರು ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 13 ಮಕ್ಕಳಿಗೆ ವಿದ್ಯಾರ್ಥಿ ವೇತನ ,ಕೊಡೆ, ಮಾಸ್ಕ್, ಪುಸ್ತಕ ಮತ್ತು ಪೆನ್ನುಗಳನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. ಕಲಾ ಪೋಷಕ ವಿಜಯ ಚಂದ್ರ ಮುಂಡ್ಲಿ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾರಾನಾಥ ಬೊಳ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರವೀಣ್ ನೆಲ್ಲಿಕಟ್ಟೆ ಸ್ವಾಗತಿಸಿ ಕುಮಾರಿ ಸುಚಿತ್ರಾ ಧನ್ಯವಾದಗೈದರು, ಸಂದೀಪ್ ಬಾರಾಡಿ ಕಾರ್ಯಕ್ರಮ ನಿರೂಪಿಸಿದರು .