ಕುಂದಾಪುರ: ನಾಳೆ (ಸೆ.19) ಕರಾವಳಿಯ ಪ್ರಸಿದ್ಧ ಕ್ರೀಡಾ ಮಳಿಗೆ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ನ ಸ್ಥಳಾಂತರ ಹಾಗೂ ಉದ್ಘಾಟನಾ ಸಮಾರಂಭ

ಕುಂದಾಪುರ: ಕಳೆದ 26 ವರ್ಷಗಳಿಂದ ಕ್ರೀಡಾ ಸಲಕರಣೆಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಕ್ರೀಡಾ ಮಳಿಗೆ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ಕುಂದಾಪುರದ ಮಳಿಗೆ ಶಾಸ್ತ್ರೀ ಸರ್ಕಲ್ ಬಳಿಯ ಜೇಸಿ ಕಾಂಪ್ಲೆಕ್ಸ್ ನ ಸ್ವಂತ ಶೋರೂಮ್ ಗೆ ಸ್ಥಳಾಂತರಗೊಳ್ಳಲಿದೆ.

ಸ್ಥಳಾಂತರಿತ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ ನಾಳೆ (ಸೆ.19) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ನ ಎಜಿಎಂ ಮಾಧವ ವಿ.ಪಿ., ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಮಾಜಿ ನಾಯಕ ಶ್ರೀಪಾದ್ ಉಪಾಧ್ಯಯ, ರಾಷ್ಟಮಟ್ಟದ ವಾಲಿಬಾಲ್ ತೀರ್ಪುಗಾರ ಜಾಯ್ ಜೆ. ಕಾರ್ವಾಲೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ನ ಮಾಲೀಕ ಸದಾನಂದ ನಾವಡ, ಮೈತ್ರಿ ಎಸ್. ನಾವಡ, ನಿತ್ಯಾನಂದ ನಾವಡ ಉಪಸ್ಥಿತರಿರುವರು.

ಕರಾವಳಿಯ ಪ್ರಮುಖ ಪಟ್ಟಣ ಕುಂದಾಪುರದಲ್ಲಿ 26 ವರ್ಷಗಳ ಹಿಂದೆ ನಾವಡರ ಕೇರಿಯ ಸದಾನಂದ ನಾವಡ ಎಂಬ ಕ್ರಿಯಾಶೀಲ ವಿದ್ಯಾರ್ಥಿ, ಸಂಘಟಕ, ಆಗಷ್ಟೇ ಪದವಿ ಶಿಕ್ಷಣ ಮುಗಿಸಿ ಬದುಕಿನಲ್ಲಿ ಸ್ವಂತ ನೆಲೆ ಕಂಡುಕೊಳ್ಳುವ ಹುಮ್ಮಸ್ಸಿನೊಂದಿಗೆ ಸಣ್ಣ ಕ್ರೀಡಾ ಮಳಿಗೆಯೊಂದನ್ನು ಗಾಂಧೀ ಪಾರ್ಕ್ ಎದುರಿನ ಶಂಕರ್ ಕಾಂಪ್ಲೆಕ್ಸ್ ನಲ್ಲಿ ಡಿಸೆಂಬರ್ 25 , 1995 ರಂದು ಆರಂಭಿಸಿ ಪ್ರಾಮಾಣಿಕ ವ್ಯಾಪಾರ ಮುಂದುವರಿಸುತ್ತಾ ಸೀಮಿತ ಮಾರುಕಟ್ಟೆಯ ಕ್ರೀಡಾ ಸಲಕರಣೆಗಳ ವ್ಯವಹಾರವನ್ನು ವಿಸ್ತರಿಸಿ ಗ್ರಾಹಕರ ವಿಶ್ವಾಸಗಳಿಸಿ ಭಟ್ಕಳ, ಮಣಿಪಾಲ, ಉಡುಪಿ, ಮಂಗಳೂರು, ಮೂಡಬಿದ್ರೆ ಯಲ್ಲೂ ಮಳಿಗೆಗಳನ್ನು ಸ್ಥಾಪಿಸಿ ಯಶಸ್ಸು ಗಳಿಸಿದರು.

ಪ್ರಸ್ತುತ ಕೊರೊನಾ ಸಂಕಷ್ಟ / ಸವಾಲುಗಳ ಕಾಲದಲ್ಲಿ ಎಲ್ಲಾ ವ್ಯವಹಾರ ನೆಲ ಕಚ್ಚುತ್ತಿರುವ ಸಂಧರ್ಭ ಹಾಗೂ ಆನ್ ಲೈನ್ ಮಾರ್ಕೆಟಿಂಗ್ ನಿಂದ ಕುಂದಾಪುರ/ ಉಡುಪಿ/ಮಣಿಪಾಲ ಈ ಮೂರು ಮಳಿಗೆಗಳೊಂದಿದೆ ಮಾತ್ರ ವ್ಯವಹಾರ ಮುಂದುವರೆಸುತ್ತಿದ್ದಾರೆ. ಹಾಗೆಯೇ ಸ್ವಂತ ಮೊಬೈಲ್ ಆ್ಯಪ್ ಹೊಂದಿರುವ ರಾಜ್ಯದ ಏಕೈಕ ಮಳಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್.

ವಡೇರ ಹೋಬಳಿ ಗಾಂಧೀ ಪಾರ್ಕ್ ಎದುರು ಶಂಕರ್ ಕಾಂಪ್ಲೆಕ್ಸ್ ನಿಂದ ಹಲವು ವರ್ಷಗಳ ಹಿಂದೆ ಕುಂದಾಪುರದ ಜನನಿಬಿಡ ಶಾಸ್ತ್ರೀ ಸರ್ಕಲ್ ಪರಿಸರದ ಯಡ್ತರೆ ಮಂಜಯ್ಯ ಶೆಟ್ಟಿ ಮುಖ್ಯ ರಸ್ತೆಯ ಹೆಗ್ಡೆ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿ ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ.

ಪ್ರಸ್ತುತ ಶಾಸ್ತ್ರೀ ಸರ್ಕಲಿನಿಂದ ಜೆ.ಎಲ್.ಬಿ ರಸ್ತೆಯ ಕೂಗಳತೆ ದೂರದ ತಮ್ಮದೇ ಸ್ವಂತ ಮಾಲೀಕತ್ವದ ಗ್ರೌಂಡ್ ಫ್ಲೋರ್ ಅಂಗಡಿ ಕೋಣೆಗಳಿಗೆ ಕುಂದಾಪುರದ ಶಾಖಾ ಮಳಿಗೆಯನ್ನು ಸ್ಥಳಾಂತರಿಸುತಿದ್ದಾರೆ. ಪ್ರಸ್ತುತ ಮಳಿಗೆ ಗ್ರಾಹಕರಿಗೆ ಇನ್ನಷ್ಟು ವಿಶಾಲ ಪಾರ್ಕಿಂಗ್, ಗ್ರೌಂಡ್ ಫ್ಲೋರ್ ನ ಆರಾಮ ಅನುಕೂಲತೆ , ಅನುಭವೀ ಸಿಬ್ಬಂದಿಯ ಸೇವೆ ಲಭ್ಯವಿದೆ.
ಪತ್ನಿ ಮೈತ್ರಿ ನಾವಡ, ಇಬ್ಬರು ಮಕ್ಕಳು ಹಾಗೂ ಮಾರ್ಗದರ್ಶನ ನೀಡುತ್ತಿರುವ ಸಹೋದರರಾದ ಮಾಧವ ನಾವಡ , ಉಸ್ತುವಾರಿ ನಿತ್ಯಾನಂದ ನಾವಡ ಹಾಗೂ 16 ಸಿಬ್ಬಂದಿಗಳ ಸಹಕಾರದಲ್ಲಿ ಗ್ಯಾಲಕ್ಸಿ ಸಂಸ್ಥೆ ಇನ್ನಷ್ಟು ಬೆಳೆದು ಕುಂದಾಪುರದ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ನಕ್ಷತ್ರಗಳು ಮಿನುಗಲಿ ಎಂದು ಹಾರೈಸಿ.

ಸ್ಥಳ ವಿಳಾಸ: ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್, ನೆಲಮಹಡಿ , ಜೇಸಿ ಕಾಂಪ್ಲೆಕ್ಸ್, JLB ರಸ್ತೆ , ಶಾಸ್ತ್ರೀ ಸರ್ಕಲ್ ಬಳಿ , ಕುಂದಾಪುರ.