ಕಾರ್ಕಳ: ಸೆ.17ರಂದು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಮೂತ್ರ ಪಿಂಡ (ಕಿಡ್ನಿ ) ರೋಗದ ಉಚಿತ ತಪಾಸಣಾ ಶಿಬಿರ

ಕಾರ್ಕಳ: ಕಾರ್ಕಳ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 17ರ ಶುಕ್ರವಾರದಂದು ಮೂತ್ರ ಪಿಂಡ (ಕಿಡ್ನಿ ) ರೋಗದ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಕೀರ್ತಿನಾಥ್ ಬಲ್ಲಾಳ ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ. ಶಂಕರ್ ಪ್ರಸಾದ್ ಮತ್ತು ಸಹಾಯಕರಾದ ಡಾ ಮೋಹನ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಡೆಯಲಿದ್ದು, ವೈದ್ಯರ ಸಲಹೆ ಮೇರೆಗೆ ಅವಶ್ಯವುಳ್ಳ ಮೊದಲ 50 ಜನರಿಗೆ ರಕ್ತದಲ್ಲಿನ ಸಕ್ಕರೆ, ಲಿಪಿಡ್ ಪ್ರೊಫೈಲ್, ಸೆರಂ ಎಲೆಕ್ಟ್ರಾಲ್ಯೆಟ್ಸ್, ಸೆರಂ ಕ್ರಿಯೇಟೆನಿನ್ ಮತ್ತು ಮೂತ್ರ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು.

ಈ ಕೆಳಗಿನ ಲಕ್ಷಣವುಳ್ಳವರು ಶಿಬಿರಕ್ಕೆ ಹಾಜರಾಗಬಹುದು. ಬೆಳಿಗ್ಗೆ ಎದ್ದ ತಕ್ಷಣ ಕಣ್ಣುಗಳ ಸುತ್ತ ಬಾವು, ಕೈ ಮತ್ತು ಮುಖದಲ್ಲಿ ಬಾವು, ಹಸಿವು ಕಡಿಮೆಯಾಗುವುದು, ವಾಂತಿ ಬರುವುದು, ರಾತ್ರಿ ವೇಳೆ ಮೇಲಿಂದ ಮೇಲೆ ಮೂತ್ರ ವಿಸರ್ಜನೆ, ಸಣ್ಣ ವಯಸ್ಸಿನಲ್ಲಿ ಅಧಿಕ ರಕ್ತದ ಒತ್ತಡ, ರಕ್ತದೀನತೆ, ಅಶಕ್ತತೆ, ಮೂತ್ರದಲ್ಲಿ ಊತ, ರಕ್ತ ಅಥವಾ ಕೇವು ಹೋಗುವುದು, ಹೊಟ್ಟೆಯಲ್ಲಿ ಗಂಟು, ಸೊಂಟದಲ್ಲಿ ನೋವು, ಮೂತ್ರ ವಿಸರ್ಜನೆ ಕಷ್ಟವಾಗುವುದು, ಇತ್ಯಾದಿಗಳು ಕಿಡ್ನಿ ರೋಗದ ಲಕ್ಷಣಗಳು. ಇದರ ಜೊತೆಗೆ ಧೀರ್ಘ ಅವಧಿಯಿಂದ ಸಕ್ಕರೆ ಕಾಯಿಲೆವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯವಿದ್ದು, ಇದರ ಪ್ರಯೋಜನವನ್ನು ಅವಶ್ಯವುಳ್ಳವರು ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 97313 08293, 08258 230583 ಕರೆ ಮಾಡಬಹುದು.