ಕೊಡವೂರು: ₹3 ಕೋಟಿ ವೆಚ್ಚದ ಕೊಡವೂರು- ಲಕ್ಷ್ಮೀನಗರ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ

ಮಲ್ಪೆ: ಮಲ್ಪೆಯಿಂದ ಸಂತೆಕಟ್ಟೆ ಮಾರ್ಗವಾಗಿ ದಿನದಲ್ಲಿ ಅನೇಕ ಶಾಲಾ ವಾಹನ ಪ್ರವಾಸಿಗರ ವಾಹನ ಮತ್ತು ಮೀನುಗಾರಿಕೆಗೆ ಸಂಬಂಧಪಟ್ಟಿರುವ ದೊಡ್ಡ ದೊಡ್ಡ ವಾಹನಗಳು ಸಂಚರಿಸುವುದು ಕೊಡವೂರು ಲಕ್ಷ್ಮೀನಗರ ಕಿರಿದಾದ ಮಾರ್ಗವಾಗಿ ರಸ್ತೆಯಿಂದ, ನಾಗರಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದನ್ನು ಗುರುತಿಸಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಕಾಂಕ್ರೀಟಿಕರಣ ಮಾಡಬೇಕು. ಆಗ ಮಾತ್ರ ಅಪಘಾತ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮನಗಂಡ ನಗರಸಭಾ ಸದಸ್ಯ ವಿಜಯ ಕೊಡವೂರು ಅವರು ತನ್ನ ಕಾರ್ಯಕರ್ತರೊಂದಿಗೆ ಶಾಸಕ ರಘುಪತಿ ಭಟ್ ಅವರನ್ನು ಭೇಟಿಯಾಗಿ ವಿನಂತಿಸಿಕೊಂಡರು.

ಕೊಡವೂರಿನ ಜನತೆಯ ಮನವಿಗೆ ಸ್ಪಂದಿಸಿದ ಶಾಸಕರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮೂರು ಕೋಟಿ ಅನುದಾನವನ್ನು ಕೊಡವೂರಿನ ಅಭಿವೃದ್ಧಿಗೆ ಸಹಕರಿಸಿದ್ದಾರೆ.

ಅದರಂತೆ ಕೊಡವೂರು- ಲಕ್ಷ್ಮೀನಗರ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನಡೆಯಿತು.

ಕಡಿಮೆ ಸಮಯದಲ್ಲೇ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ಕೊಡವೂರಿನ ನಾಗರಿಕರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಬಹುದಿನಗಳ ಬೇಡಿಕೆ ಆಗಿರುವಂತ ಇದನ್ನು ನಗರಸಭಾ ಸದಸ್ಯರು ಮುತುವರ್ಜಿಯಿಂದ ಶಾಸಕರಿಗೆ ತಿಳಿಸಿ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌.

ಕೊಡವೂರಿನ ಅಭಿವೃದ್ಧಿಗೆ ಶಾಸಕರು ಸಹಕರಿಸಿ ಇದೇ ರೀತಿ ಇನ್ನು ಮುಂದಿನ ದಿನಗಳಲ್ಲಿ ಊರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಊರಿನ ನಾಗರಿಕರು ಸಂತೋಷವನ್ನು ವ್ಯಕ್ತಪಡಿಸಿದರು.