ಆಸ್ಕರ್ ಫೆರ್ನಾಂಡೀಸ್ ನಿಧನಕ್ಕೆ ಕ್ಸೇವಿಯರ್ ಡಿಮೆಲ್ಲೋ ಸಂತಾಪ

ಕಾರ್ಕಳ:ಮಾಜಿ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್ ಅವರ ನಿಧನಕ್ಕೆ ಬೆಳ್ಮಣ್ ಮಾಜಿ ತಾ.ಪಂ.ಸದಸ್ಯ,ಸಾಮಾಜಿಕ ಹೋರಾಟಗಾರರಾದ ಕ್ಸೇವಿಯರ್ ಡಿಮೆಲ್ಲೋ ಅವರು ಸಂತಾಪ ಸೂಚಿಸಿದ್ದಾರೆ.

ಆಸ್ಕರ್ ಫೆರ್ನಾಂಡಿಸ್ ಅವರಿಂದ ಬೆಳ್ಮಣ್ ಭಾಗದಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳಾಗಿವೆ.ಕರಾವಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿ ಮೇರು ವ್ಯಕ್ತಿತ್ವ ಹೊಂದಿದ್ದ ಆಸ್ಕರ್ ಫೆರ್ನಾಂಡೀಸ್ ಅವರು ತಮ್ಮ ಸರಳ ಸಜ್ಜನಿಕೆಯ ಮೂಲಕ ದೇಶಾದ್ಯಂತ ಅಪಾರ ಮಂದಿ ಪಕ್ಷಾತೀತ ಅಭಿಮಾನಿಗಳನ್ನು ಹೊಂದಿದ್ದರು.ಎಂದವರು ತಿಳಿಸಿದ್ದಾರೆ.

ಅವರ ಅಕಾಲಿಕ ನಿಧನ ಕರಾವಳಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.