ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ.!

ಬೆಂಗಳೂರು: ನೋಕಿಯಾ ಮೊಬೈಲ್ ಕಂಪೆನಿ ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಸಿ ಸರಣಿಯಲ್ಲಿ ಹೊಸದಾಗಿ C01 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಹೊಸ ನೋಕಿಯಾ C01 ಪ್ಲಸ್ ಸ್ಮಾರ್ಟ್‌ಫೋನ್, ಆರಂಭಿಕ ಮಾದರಿಯ ಆವೃತ್ತಿಯಾಗಿದ್ದು, ದೇಶದಲ್ಲಿ ₹5,999 ದರ ಹೊಂದಿದೆ. ನೀಲಿ ಮತ್ತು ನೇರಳೆ ಬಣ್ಣದಲ್ಲಿ ಹೊಸ ಫೋನ್ ಲಭ್ಯವಾಗಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ನೋಕಿಯಾ ಸ್ಮಾರ್ಟ್‌ಫೋನ್ ದೊರೆಯಲಿದೆ.

ತಾಂತ್ರಿಕ ವೈಶಿಷ್ಟ್ಯ:

5.45 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಒಕ್ಟಾ ಕೋರ್ ಉನಿಸಾಕ್ SC9863A ಪ್ರೊಸೆಸರ್ ಇದರಲ್ಲಿದೆ.

2GB RAM ಮತ್ತು 16GB ಮೆಮೊರಿ ಸ್ಟೋರೇಜ್ ಇದ್ದು, ಆಂಡ್ರಾಯ್ಡ್ 11 ಗೊ ಎಡಿಶನ್, 5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಸ ನೋಕಿಯಾ ಫೋನ್‌ನಲ್ಲಿದೆ. ಅಲ್ಲದೆ, 3000mAh ಬ್ಯಾಟರಿ ಬೆಂಬಲ ಹೊಂದಿದೆ.