ರಾಜ್ಯದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ 16 ಉಪ ತಳಿ ಪತ್ತೆ

ಬೆಂಗಳೂರು: ಕೋವಿಡ್‌–19 ಡೆಲ್ಟಾ ರೂಪಾಂತರದ 16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಜಗತ್ತಿನಾದ್ಯಂತ ಕೋವಿಡ್ ಡೆಲ್ಟಾ ರೂಪಾಂತರದ 32 ಉಪ ರೂಪಾಂತರಗಳನ್ನು ಕಂಡುಬಂದಿದ್ದು, ಈ ಪೈಕಿ 16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ.

ರಾಜ್ಯದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಎವೈ.4 ಮತ್ತು ಎವೈ.12ನ ರೂಪಾಂತರವು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಈ ವೈರಾಣು ತನ್ನ ಸ್ಪೈಕ್‌ ಪ್ರೋಟಿನ್‌ನ ನೆರವಿನಿಂದ ಮನುಷ್ಯನ ಕೋಶಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಇವುಗಳ ವರ್ತನೆ ಮೇಲೆ ನಿಗಾ ಇಡುವುದು ತುಂಬಾ ಅವಶ್ಯ ಎಂದು ರಾಜ್ಯ ಕೋವಿಡ್‌–19 ಜಿನೋ ಮಿಕ್‌ ಸರ್ವೇಲೆನ್ಸ್‌ ಸಮಿತಿಯ ಸದಸ್ಯರೂ ಆಗಿರುವ ಎಚ್‌ಸಿಜಿ ಆಸ್ಪತ್ರೆಯ ಡೀನ್‌ ಡಾ.ವಿಶಾಲ್‌ ರಾವ್ ತಿಳಿಸಿದ್ದಾರೆ.

ಎವೈ.4 ಎಂದು ಕರೆಯಲ್ಪಡುವ ಡೆಲ್ಟಾ ರೂಪಾಂತರದ ಉಪ ರೂಪಾಂತರದಲ್ಲಿ ಸ್ಪೈಕ್‌ ಪ್ರೋಟಿನ್‌ ಮ್ಯುಟೇಷನ್‌ (ಜಿ142ಡಿ) ಕರ್ನಾಟಕದ ಮಟ್ಟಿಗೆ ಶೇ 26ರಷ್ಟು ಕಂಡುಬಂದಿದೆ. ಎವೈ.12 ರೂಪಾಂ ತರದಲ್ಲಿ ಇದು ಕೇವಲ ಶೇ 1.3ರಷ್ಟು ಕಂಡುಬಂದಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

ರೂಪಾಂತರಗಳು ಕಡಿಮೆಯಾಗುತ್ತಿರುವುದರಿಂದ ಡೆಲ್ಟಾ ರೂಪಾಂತರವು ನಿಧಾನವಾಗಿ ಕ್ಷೀಣಿಸುತ್ತಿದೆ. ಹಾಗೆಂದು ಇದನ್ನು ಅಲಕ್ಷಿಸುವಂತಿಲ್ಲ ಎಂದೂ ಅವರು ಹೇಳಿದ್ದಾರೆ.