ಅರ್ಹ ವಿದ್ಯಾರ್ಥಿಗಳಿಗಿದೆ ವಿದ್ಯಾರ್ಥಿವೇತನ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಉಡುಪಿ: ಭಾರತ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖಾ ವತಿಯಿಂದ ಬೀಡಿ, ಗಣಿ ಹಾಗೂ ಸಿನಿಮಾ ಕಾರ್ಮಿಕರ ಮಕ್ಕಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕ್ರಮವಾಗಿ ನವೆಂಬರ್ 15 ಮತ್ತು 30 ಕೊನೆಯ ದಿನ, ಶಾಲಾ ಮುಖ್ಯಸ್ಥರು ಅರ್ಜಿಯನ್ನು ಪರಿಶೀಲಿಸಿ ಶಿಫಾರಸ್ಸು ಮಾಡಲು ಡಿಸೆಂಬರ್ 15 ಮತ್ತು ನೋಡೆಲ್ ಅಧಿಕಾರಿಗಳಿಂದ ಪರಿಶೀಲನೆ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ.

ಎನ್‌ಎಸ್‌ಪಿ https://scholarship.gov.in  ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಯಾವುದೇ ವಿವರಣೆ ಬೇಕಾಗಿದ್ದಲ್ಲಿ [email protected] ಅಥವಾ 0120-6619540 ವನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-23471406/080-2347491 ಮತ್ತು [email protected]ನ್ನು ಸಂಪರ್ಕಿಸುವAತೆ ಕಾರ್ಮಿಕ ಕಲ್ಯಾಣ ಆಯುಕ್ತರ ಪ್ರಕಟಣೆ ತಿಳಿಸಿದೆ