ಬೈಂದೂರು: ರಾಜಧಾನಿ ಎಕ್ಸಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಿಜೂರು ರೈಲ್ವೆ ಸ್ಟೇಷನ್ ನ ಕೆರ್ಗಾಲ್ ನಾಯ್ಕನಕಟ್ಟೆ ರೈಲ್ವೇ ಗೇಟ್ ಬಳಿ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಗುರುವ ದೇವಾಡಿಗ (45) ಮೃತ ವ್ಯಕ್ತಿ. ಇವರು ಕೆರ್ಗಾಲ್ ನಾಯ್ಕನಕಟ್ಟೆ ರೈಲ್ವೇ ಗೇಟ್ ಬಳಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












