ಭಾರತಕ್ಕೆ 157 ರನ್‌ಗಳ ಭರ್ಜರಿ ಗೆಲುವು: ಸರಣಿಯಲ್ಲಿ 2–1ರ ಮುನ್ನಡೆ

ಲಂಡನ್‌: ಭಾರತ ತಂಡ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ಮುಂದಿಟ್ಟ 368 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ತಂಡ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಪತನಗೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ:

ಭಾರತ ಮೊದಲ ಇನ್ನಿಂಗ್ಸ್ 191ಕ್ಕೆ ಆಲೌಟ್ (ವಿರಾಟ್ ಕೊಹ್ಲಿ 50, ಶಾರ್ದೂಲ್ ಠಾಕೂರ್ 57, ಕ್ರಿಸ್ ವೋಕ್ಸ್ 55ಕ್ಕೆ 4 ವಿಕೆಟ್)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 290 ರನ್ನಿಗೆ ಆಲೌಟ್ (ಒಲಿ ಪಾಪ್ 81, ಕ್ರಿಸ್ ವೋಕ್ಸ್ 50, ಉಮೇಶ್ ಯಾವದ್ 76ಕ್ಕೆ 3 ವಿಕೆಟ್)

ಭಾರತ ದ್ವಿತೀಯ ಇನ್ನಿಂಗ್ಸ್ 466ಕ್ಕೆ ಆಲೌಟ್ (ರೋಹಿತ್ ಶರ್ಮಾ 127, ಪೂಜಾರ 61, ಠಾಕೂರ್ 60, ಪಂತ್ 50, ಕ್ರಿಸ್ ವೋಕ್ಸ್ 83ಕ್ಕೆ 3 ವಿಕೆಟ್ )

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 210ಕ್ಕೆ ಆಲೌಟ್ (ಹಸೀಬ್ ಹಮೀದ್ 63, ರೋರಿ ಬರ್ನ್ಸ್ 50, ಉಮೇಶ್ ಯಾದವ್ 60ಕ್ಕೆ 3 ವಿಕೆಟ್ )