ಬೆಂಗಳೂರು: ಹಲವು ಷರತ್ತುಬದ್ಧ ನಿಯಮಗಳೊಂದಿಗೆ ಗರಿಷ್ಠ ಐದು ದಿನಗಳ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಬೆಂಗಳೂರಿನಲ್ಲಿ ಹಬ್ಬದ ನಿಯಮ ಪಾಲನೆಯ ಉಸ್ತುವಾರಿಯನ್ನು ಬಿಬಿಎಂಪಿಗೆ ವಹಿಸಲಾಗಿದೆ. ಅನುಮತಿ ಕೊಟ್ಟ ಸ್ಥಳಗಳು, ಸರ್ಕಾರಿ, ಖಾಸಗಿ ಖಾಲಿ ಜಾಗಗಳು, ಮೈದಾನಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ನೀಡಲಾಗಿದೆ.
ಇನ್ನು, ಬೆಂಗಳೂರು ಮಾತ್ರವಲ್ಲದೇ ಎಲ್ಲಾ ಜಿಲ್ಲೆಗಳಲ್ಲಿ ಗಣೇಶೋತ್ಸವ ವೇಳೆ ಜಿಲ್ಲಾಡಳಿತಗಳು ನಿಗಾ ವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ದೇವಸ್ಥಾನ ಮತ್ತು ಮನೆಗಳಲ್ಲಿ ಹೊರತುಪಡಿಸಿ, ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಬಗ್ಗೆ ಸರ್ಕಾರ ಹಲವು ಷರತ್ತುಗಳನ್ನು ಹಾಕಿದೆ.
ಏನು ಷರತ್ತು?
- ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು, ಮಂಗಳವಾರದೊಳಗೆ ಮೂರ್ತಿಗಳ ವಿಸರ್ಜನೆ ಮಾಡಬೇಕು.
- ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಗಣೇಶನ ಮೆರವಣಿಗೆ ಮಾಡಬಾರದು
- ಗರಿಷ್ಠ ಐದು ದಿನಗಳು ಮಾತ್ರ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಾಗಿದೆ.
- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ.
- ಜನಜಂಗುಳಿ ಸೇರಬಾರದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
- ಆಯೋಜಕರಿಗೆ ಷರತ್ತು ವಿಧಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಹಸಿರು ನಿಶಾನೆ ತೋರಲಾಗಿದೆ.
- ಸಾಧ್ಯವಾದಷ್ಟು ಖಾಲಿ ಜಾಗದಲ್ಲಿ ಗಣೇಶ ಕೂರಿಸಲು ಹೇಳಲಾಗಿದೆ.
- ಐವತ್ತು ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ.
- ಆರ್ಕೇಸ್ಟ್ರಾ, ಡಿಜೆ ಸೌಂಡ್ಗೆ ಬ್ರೇಕ್ ಹಾಕಲಾಗಿದೆ.
- 50 × 50 ಜಾಗದಲ್ಲಿ ಪೆಂಡಲ್ ಹಾಕಲು ಅವಕಾಶ ನೀಡಲಾಗಿದೆ.
- ಗಣೇಶ ವಿಸರ್ಜನೆ ಮಾಡವಾಗ ಇಂತಿಷ್ಟು ಜನರು ಮಾತ್ರ ಹೋಗಬೇಕು
- ಗಡಿ ಜಿಲ್ಲೆಯ ಭಾಗದಲ್ಲಿ ಕೋವಿಡ್ ರೆಟ್ ಶೇಕಡ 2 ಕ್ಕಿಂತ ಕಡಿಮೆ ಇರಬೇಕು. ಇಂತಹ ಕಡೆ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದೆ.
- ವಾರ್ಡ್ಗೆ ಒಂದೇ ಗಣೇಶ ಪ್ರತಿಷ್ಠಾಪನೆ ಮಾಡಬೇಕು.
- Apartment ನಲ್ಲಿ ಗಣೇಶ ಕೂರಿಸಬಹುದು, ಆದ್ರೆ 20 ಜನರು ಮಾತ್ರ ಸೇರಬೇಕು.
- 9 ಗಂಟೆ ಮೇಲೆ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ
- ಕೇರಳ ಗಡಿ ಜಿಲ್ಲೆಯ ಭಾಗದಲ್ಲಿ ಕಠಿಣ ಕ್ರಮಗಳ ಮೂಲಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.