ಕಾಪು ಬಿಜೆಪಿ ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳ ಸಭೆ

ಕಾಪು: ಕಾಪು ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿಕೇಂದ್ರ ಪದಾಧಿಕಾರಿಗಳ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಬಿಜೆಪಿ ಪಕ್ಷದಲ್ಲಿ ಇರುವಷ್ಟು ಸಂಘಟನಾತ್ಮಕ ವ್ಯವಸ್ಥೆ ಇತರ ಯಾವುದೇ ಪಕ್ಷದಲ್ಲಿ ಇಲ್ಲ. ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಅದರಲ್ಲಿ ಮಹಾಶಕ್ತಿಕೇಂದ್ರದ ಜವಾಬ್ದಾರಿ ಅತ್ಯಂತ ಮಹತ್ತರವಾದುದು. ಮಹಾಶಕ್ತಿಕೇಂದ್ರಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಸಂಘಟನೆ ಬಲಿಷ್ಠಗೊಳ್ಳುವುದು. ಪ್ರಾಮಾಣಿಕವಾಗಿ ಜವಾಬ್ದಾರಿಗೆ ನ್ಯಾಯ ಕೊಟ್ಟು ಪಕ್ಷ ಬೆಳೆಸೋಣ ಅದರೊಂದಿಗೆ ನಾವೂ ಬೆಳೆಯೋಣ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾಪುವಿನ 8 ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಗಳು ಹಾಗೂ ಸಂಘಟನಾತ್ಮಕ ವ್ಯವಸ್ಥೆ ಬಗ್ಗೆ ಮನದಟ್ಟು ಮಾಡಿದರು.

ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಮುಂಬರುವ ಚುನಾವಣೆಗಳನ್ನು ಗೆಲ್ಲಲು ಪಕ್ಷ ಸಂಘಟನಾತ್ಮಕವಾಗಿ ಗಟ್ಟಿಗೊಳಿಸಲು ಕರೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಗೆಲ್ಲಲು ಈಗಲೇ ಸಿಧ್ಧರಾಗಲು ಕರೆ ನೀಡಿದರು.

ನೂತನವಾಗಿ ಮಂಡಲ ಪ್ರಭಾರಿಗಳಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ರವೀಂದ್ರ ಮಡಿವಾಳ ರವರು ಕಾಪು ಬಿಜೆಪಿ ಕಚೇರಿಗೆ ಭೇಟಿ ನೀಡಿದುದರಿಂದ ಅವರನ್ನು ಗೌರವಿಸಲಾಯಿತು. ಬಳಿಕ ಅವರು ಮಾತನಾಡಿ ಕಾಪು ಬಿಜೆಪಿ ಪಕ್ಷ ಕೊಟ್ಟ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ‌ಕೆಲಸ ನಿರ್ವಹಿಸುವುದನ್ನು ಗಮನಿಸಿದ್ದು ಕಾಪು ಮಂಡಲದ ಪ್ರಭಾರಿ ಜವಾಬ್ದಾರಿ ನಿರ್ವಹಿಸಲು ಸಂತೋಷಪಡುವೆ ಎಂದರು.

ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿಗಳಾದ ಮಾಲಿನಿ ಶೆಟ್ಟಿ, ಲತಾ ಆಚಾರ್ಯ, ರಾಜೇಶ್ ಕುಂದರ್, ಮಂಡಲ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಕೋಟ್ಯನ್, ಸುಧಾಮ ಶೆಟ್ಟಿ, ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳಾದ, ಸಂದೀಪ್ ರಾವ್, ಶಿವಪ್ರಸಾದ್ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ಕೋಟ್ಯನ್, ಜಿಯಾನಂದ ಹೆಗ್ಡೆ, ವಿಶ್ವನಾಥ ಕುರ್ಕಾಲು ಮಹಾಶಕ್ತಿಕೇಂದ್ರ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.