ಉಡುಪಿ: ಪ್ರತಿವರ್ಷ ಕೃಷ್ಣಜನ್ಮಾಷ್ಟಮಿಗೆ ವಿಭಿನ್ನ ಮಾದರಿಯ ವೇಷ ಧರಿಸಿ, ಆ ಮೂಲಕ ಧನ ಸಂಗ್ರಹ ಮಾಡಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಹಾಗೂ ಅಸಹಾಯಕರಿಗೆ ನೆರವಿನ ಹಸ್ತ ಚಾಚುತ್ತಿರುವ ಸಮಾಜ ಸೇವಕ ರವಿ ಕಟಪಾಡಿ ಅವರು ಈ ಬಾರಿ ಡಾರ್ಕ್ ಅಲೈಟ್ ವೇಷ ಧರಿಸಿದ್ದಾರೆ. ಆ ಮೂಲಕ ಅನಾರೋಗ್ಯ ಪೀಡಿತ ಏಳು ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
ರವಿ ಅವರು ಕಳೆದ ಆರು ವರ್ಷದಲ್ಲಿ ವೇಷ ಧರಿಸಿ 72 ಲಕ್ಷ ರೂಪಾಯಿ ಸಂಗ್ರಹಿಸಿ ದಾನ ಮಾಡಿದ್ದಾರೆ. ಈ ಬಾರಿ ಹಾಲಿವುಡ್ ಸಿನಿಮಾದ ‘ಡಾರ್ಕ್ ಅಲೈಟ್’ ವೇಷದಲ್ಲಿ ರವಿ ಕಾಣಿಸಿಕೊಳ್ಳಲಿದ್ದು, ಅವರಿಗೆ ಜನರ ಸಹಕಾರ ಬೇಕಾಗಿದೆ. ಎರಡು ದಿನ ರವಿ ಉಡುಪಿ, ಕಟಪಾಡಿ, ಮಲ್ಪೆ, ಕಟಪಾಡಿ, ಮಣಿಪಾಲ ಭಾಗದಲ್ಲಿ ಓಡಾಡಲಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೃಷ್ಣ ಮಠದಲ್ಲಿಯೂ ಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಸರಳವಾಗಿ ನಡೆಯಲಿದೆ.