ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಸೋಂಕು ಭೀತಿ ಉಂಟಾಗಿದೆ. ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ಗೆ ತಲುಪಿವೆ.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಪ್ರಮುಖ 8 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರದ ಏರಿಕೆಯಲ್ಲಿ 8 ಜಿಲ್ಲೆಗಳು ಮುಂಚೂಣಿಯಲ್ಲಿವೆ.
ಜಿಲ್ಲೆ (ಪಾಸಿಟಿವಿಟಿ ರೇಟ್)
ದಕ್ಷಿಣ ಕನ್ನಡ-3.26
ಉಡುಪಿ-2.63
ಕೊಡಗು-2.00
ಚಿಕ್ಕಮಗಳೂರು-1.95
ಹಾಸನ-1.71
ಶಿವಮೊಗ್ಗ-1.39
ಮೈಸೂರು-1.23
ಉತ್ತರ ಕನ್ನಡ-1.00
ಎಲ್ಲಾ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 0. ಇದ್ರೆ ಈ 8 ಜಿಲ್ಲೆಗಳಲ್ಲಿ ಮಾತ್ರ 1.00 ನಿಂದ 3.26 ರವರೆಗೆ ಏರಿಕೆ ಕಂಡು ಗಾಬರಿ ಹುಟ್ಟಿಸಿದೆ. ಸದ್ಯ ರಾಜ್ಯದ ಒಟ್ಟು ಪಾಸಿಟಿವಿಟಿ ದರ 0.92 ರಷ್ಟಿದೆ. ಈ ಜಿಲ್ಲೆಗಳಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸದ್ಯ ಆತಂಕ ಶುರುವಾಗಿದ್ದು, ಈಡೀ ರಾಜ್ಯಕ್ಕೆ ಈ ಜಿಲ್ಲೆಗಳೇ ಕಂಟಕವಾಗುವ ಆತಂಕ ಉಂಟುಮಾಡಿದೆ.












