ಉಡುಪಿಯ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗೆ ಪ್ರವೇಶಾತಿ ಶುರು

ಉಡುಪಿ: ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್  ಇನ್ ಸ್ಟಿಟ್ಯೂಟ್ ನಲ್ಲಿ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಶುರುವಾಗಿದ್ದು ನಿರುದ್ಯೋಗ ನಿರ್ಮೂಲನವನ್ನು ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡು ಭಾರತದ ಸರ್ಕಾರದ ಪ್ರತಿನಿಧಿಯಾಗಿರುವ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಒಂದು ವರ್ಷದ ಡಿಪ್ಲೋಮಾ ಇನ್ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗೆ ಪಿಯುಸಿ / ಡಿಗ್ರಿ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಒಂದು ವರ್ಷದ ಅವಧಿಯಲ್ಲಿ, ಪ್ರಾಯೋಗಿಕ ಜ್ಞಾನ (ಪ್ರಾಕ್ಟಿಕಲ್ ನಾಲೆಡ್ಜ್), ಸುಸ್ಥಾಪಿತ ಶಾಲೆಯಲ್ಲಿ ಒಂದು ತಿಂಗಳ ತರಬೇತಿ, ಪಠ್ಯ ಕ್ರಮದ ಯೋಜನೆ (ಲೆಸೆನ್ ಪ್ಲಾನಿಂಗ್), ಧ್ವನಿಶಾಸ್ತ್ರ(ಫೋನೆಟಿಕ್ಸ್), ಮಲ್ಟಿಮೀಡಿಯಾ ಆಧಾರಿತ ಬೋಧನೆಯ ತರಬೇತಿ, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಮುಂತಾದ ವಿಷಯಗಳ ಬಗ್ಗೆ ವಿವಿಧ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು, ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರವನ್ನು ನೀಡುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ತರಬೇತಿ ಮುಗಿಸಿದ ಸುಮಾರು 4೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಪ್ರತಿಷ್ಠಿತ ಹಾಗೂ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗವನ್ನು ಹೊಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

ಇದಲ್ಲದೆ ಇಲ್ಲಿ ಮಹಿಳೆಯರಿಗೆ ಹಾಗೂ ಟೀಚರ್ಸ್ನವರಿಗೆ ಫೋನಿಕ್ಸ್ ಟ್ರೈನಿಂಗ್, ವೇದಿಕ್ ಮಾಥ್ಸ್ ಕೋರ್ಸ್ ಅನ್ನು ನಡೆಸಲಾಗುತ್ತಿದೆ.
ಆಸಕ್ತರು ಸಂಸ್ಥೆಯ ಸಂಯೋಜಕಿ  ಸುನೀತಾ ( 9901722527) ರವರನ್ನು ಸಂಪರ್ಕಿಸಿ, ಅರ್ಜಿಯ ನಮೂನೆಯನ್ನು ಸಂಸ್ಥೆಯಲ್ಲಿ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.