ಕಾರ್ಕಳ: ಇಲ್ಲಿನ ವಿಜೇತ ವಿಶೇಷ ಶಾಲೆಯ ಸುಮಾರು 80 ವಿದ್ಯಾರ್ಥಿಗಳಿಗೆ ಉಚಿತ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಕುಂದಾಪುರದ ರಕ್ಷಿತ್ ಕುಮಾರ್ ವಂಡ್ಸೆ ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ವಿಜಯ್ ಅಯ್ಯಂಗಾರ್ ಅವರು, ಶಾಲೆಗೆ ಅವಶ್ಯಕವಿರುವ ಸುಮಾರು 20 ಸಾವಿರ ಮೌಲ್ಯದ ಅಡುಗೆ ಪಾತ್ರೆಗಳನ್ನು ದೇಣಿಗೆಯಾಗಿ ನೀಡಿದರು.
ಸಂದೀಪ್ ದೇವಾಡಿಗ ಮತ್ತು ರಂಜಿತಾ ಸಂದೀಪ್ ದಂಪತಿಗಳ ಮಗು ಮಿಥಾಂಶ್ ಹೆಸರಿನಲ್ಲಿ ವಿಜೇತ ವಿಶೇಷ ಶಾಲೆಗೆ 1 ಲಕ್ಷ ದೇಣಿಗೆ ನೀಡಿದರು.
ರಶ್ಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜು, ಉದ್ಯಮಿಗಳಾದ ಮಂಜುನಾಥ್, ಪ್ರಾಥಮಿಕ ಆರೋಗ್ಯ ಕೇಂದ್ರ ನಕ್ರೆಯ ಸುರಕ್ಷಾಧಿಕಾರಿಗಳಾದ ಕುಮುದಾವತಿ, ಅನಿತಾ, ಶ್ರೀದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಸ್ವಪ್ತ ಸ್ವರ ಮೆಲೋಡಿಯಸ್ ತಂಡದ ಮುಖ್ಯಸ್ಥ ಉಮೇಶ್ ಕೋಟ್ಯಾನ್, ವಾಮದಪದವು, ವಿಷ್ಣುಪ್ರಸಾದ್, ಪ್ರವೀಣ್ ಮತ್ತು ಡೈನಾ ದಂಪತಿಗಳು, ಮೇಲ್ವಿನ್, ರಕ್ಷಿತ್ ಶೆಟ್ಟಿ ಕುಂದಾಪುರ, ಎ. ಪಿ.ಎಂ.ಸಿ ಹಾಗೂ ವಿಜೇತ ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಶಾಲಾ ಕೋಶಾಧಿಕಾರಿ ಸಿಯಾ ಸಂತೋಷ್ ನಾಯಕ್, ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.
ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು, ಡಾ. ಕಾಂತಿ ಹರೀಶ್ ಸ್ವಾಗತಿಸಿದರು. ಶ್ರುತಿ ಶೆಟ್ಟಿ ವಂದಿಸಿದರು.