ಉಡುಪಿ: ಸುನಾಗ್ ಆಸ್ಪತ್ರೆ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಸುನವ್ಯ ಸಂಹಿತಾರ ಆರ್ಟ್ ಮತ್ತು ಆರ್ಟಿಕಲ್ಸ್ ಪುಸ್ತಕ ಬಿಡುಗಡೆ ಸಮಾರಂಭ ಇಂದು (ಆ.9) ಸಂಜೆ 5 ಗಂಟೆಗೆ ಕಡಿಯಾಳಿಯ ಭರತಾಂಜಲಿ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮನೋವೈದ್ಯರಾದ ಡಾ.ಪಿ.ವಿ. ಭಂಡಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ಕಿರಣ್ ಆಚಾರ್ಯ ಪುಸ್ತಕದ ಕುರಿತು ಮಾತನಾಡಲಿದ್ದು, ಡೆಂಟಾಕೇರ್ ನಿರ್ದೇಶಕ ಡಾ.ವಿಜಯೇಂದ್ರ ವಸಂತ್ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುನಾಗ್ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ.ನರೇಂದ್ರ ಕುಮಾರ್ ಹಾಗೂ ಡಾ.ವೀಣಾ ನರೇಂದ್ರ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.












