ಒಲಿಂಪಿಕ್ಸ್ ಹಾಕಿ: ಬ್ರಿಟನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಸೆಮಿಫೈನಲ್‌ಗೆ ಲಗ್ಗೆ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಇಂದು ನಡೆದ ರೋಚಕ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದ ಗೆಲುವು ದಾಖಲಿಸಿದೆ.

1980ರಲ್ಲಿ ಮಾಸ್ಕೋದಲ್ಲಿ ಚಿನ್ನದ ಪದಕ ಗಳಿಸಿದ ನಂತರ ಭಾರತಕ್ಕೆ ಇದುವರೆಗೆ ಒಂದೂ ಪದಕ ಒಲಿದಿಲ್ಲ. ಈಗ 41 ವರ್ಷಗಳ ನಂತರ ಬಳಿಕ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ.