ಲಂಡನ್: ಉದ್ಯಮಿ ವಿಜಯ್ ಮಲ್ಯ ಹಾಗೂ ಭಾರತೀಯ ಬ್ಯಾಂಕ್ಗಳ ನಡುವಿನ ಕಾನೂನು ಹೋರಾಟದಲ್ಲಿ ಕಡೆಗೂ ಭಾರತೀಯ ಬ್ಯಾಂಕ್ಗಳ ಒಕ್ಕೂಟಕ್ಕೆ ದೊಡ್ಡಮಟ್ಟದ ಗೆಲುವು ಸಿಕ್ಕಿದೆ.
ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಲಂಡನ್ ಹೈಕೋರ್ಟ್ ಸೋಮವಾರ ಘೋಷಣೆ ಮಾಡಿದೆ.
ಇದರಿಂದ ಭಾರತೀಯ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿ ಹೊರ ದೇಶಕ್ಕೆ ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರಿಗೆ ಇದೀಗ ಭಾರೀ ಹಿನ್ನೆಡೆಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಭಾಗಿತ್ವದ ಭಾರತೀಯ ಬ್ಯಾಂಕ್ಗಳ ಒಕ್ಕೂಟವು ಇದೀಗ ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಿದ ಸಾಲದಿಂದ ಹಣ ವಸೂಲು ಮಾಡಲು ಸಹಕಾರಿಯಾಗಲಿದೆ.
ಇನ್ನು ವಿಜಯ್ ಮಲ್ಯ ಅವರು ಲಂಡನ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆದರೆ ಅದಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.