ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಉಲ್ಬಣಗೊಂಡಿದೆ. ಇಂದು ಜಿಲ್ಲೆಯಲ್ಲಿ 214 ಕೊರೊನಾ ಪ್ರಕರಣ ದಾಖಲಾಗಿದೆ. ಆ ಮೂಲಕ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 882ಕ್ಕೆ ಏರಿಕೆಯಾಗಿದೆ.
ಉಡುಪಿ ತಾಲ್ಲೂಕಿನಲ್ಲಿ 101, ಕುಂದಾಪುರದಲ್ಲಿ 51, ಕಾರ್ಕಳದಲ್ಲಿ 60 ಹಾಗೂ ಇಬ್ಬರು ಹೊರ ಜಿಲ್ಲೆಯ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಉಡುಪಿ ತಾಲೂಕಿನ 69 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು, ಆ ಮೂಲಕ ಎರಡನೇ ಅಲೆಯಲ್ಲಿ ಒಟ್ಟು 220 ಮಂದಿ ಮೃತಪಟ್ಟಿದ್ದಾರೆ.