ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡುತ್ತಿದ್ದೇನೆ: ಬಿಎಸ್ ವೈ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾವುಕರಾದರು. ವಿದಾಯ ಭಾಷಣದ ಕೊನೆಯಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡುತ್ತಿದ್ದೇನೆ ಎಂದರು.

ಪಕ್ಷದಲ್ಲಿ 75 ವರ್ಷ ದಾಟಿದ ಯಾವುದೇ ವ್ಯಕ್ತಿಗೂ ಪಕ್ಷದಲ್ಲಿ ಸ್ಥಾನ ಇಲ್ಲ ಎಂಬ ಪದ್ಧತಿ ಇದೆ. ಆದ್ರೆ ಯಡಿಯೂರಪ್ಪನ ಬಗ್ಗೆ ಪ್ರೀತಿ ಇಟ್ಟು ಅವಕಾಶ ಮಾಡಿಕೊಟ್ಟರು. ಪ್ರೀತಿ, ನಂಬಿಕೆ ಇಟ್ಟು ನನಗೆ ಎರಡು ವರ್ಷ ಅವಕಾಶ ನೀಡಿದ್ದರು. ಪ್ರಧಾನಿ ಮೋದಿ, ನಡ್ಡಾ, ಅಮಿತ್ ಶಾ ಅವರಿಗೆ ಶಬ್ಧಗಳಲ್ಲಿ ಅಭಿನಂದನೆ ಸಲ್ಲಿಸಲಾಗುವುದಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ ಪೂರೈಸಿದೆ. ನಾಯಕತ್ವ ಬದಲಾವಣೆ ಬಿಕ್ಕಟ್ಟು ಗೊಂದಲದ ನಡುವೆಯೇ ಆರಂಭವಾದ ಸಮಾವೇಶದಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ ಸಿಎಂ ಬಿಎಸ್​ವೈ ಅವರು, ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿರು.