ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್: ಪ್ರವೇಶಾತಿ ಪ್ರಕ್ರಿಯೆ ಆರಂಭ

ಉಡುಪಿ: ವೃತ್ತಿಪರ ಕೋರ್ಸ್ ಗಳಿಗೆ ಹೆಸರುವಾಸಿಯಾಗಿರುವ “ಉಡುಪಿ ಶಿಕ್ಷಣ ಸಮೂಹ ಸಂಸ್ಥೆ”ಯಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ, ಇಂಡಿಯನ್ ನರ್ಸಿಂಗ್ ಕೌನ್ಸಿಲ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ಕರ್ನಾಟಕ ಸರಕಾರದ ಮಾನ್ಯತೆಯೊಂದಿಗೆ ಉಡುಪಿ ಶಿಕ್ಷಣ ಸಮೂಹ ಸಂಸ್ಥೆಗಳು ಹೋಟೆಲ್ ಮ್ಯಾನೇಜ್‌ಮೆಂಟ್, ಫುಡ್ ಟೆಕ್ನಾಲಜಿ, ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್, ಬಿ.ಬಿ.ಎ, ಬಿ. ಕಾಂ, ಬಿ. ಸಿ. ಎ, ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಸಪ್ಲೈ ಚೈನ್ ಆ್ಯಂಡ್
ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡಾಟಾ
ಅನಾಲಿಟಿಕ್ಸ್ ಮತ್ತು ಸೈಬರ್ ಸೆಕ್ಯೂರಿಟಿ ಹಾಗೂ ವೈದ್ಯಕೀಯ ಶಿಕ್ಷಣಗಳಾದ ನರ್ಸಿಂಗ್, ಫಿಸಿಯೋಥೆರೆಪಿ, ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿ, ಕಾರ್ಡಿಯಾಕ್ ಕೇರ್ ಟೆಕ್ನಾಲಾಜಿ, ರೆಸ್ಪರೇಟರಿ ಕೇರ್ ಟೆಕ್ನಾಲಾಜಿ ಸೇರಿದಂತೆ ವಿವಿಧ ಕೋರ್ಸ್ ಗಳನ್ನು ನೀಡುತ್ತಿದೆ.

ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ :
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಸರಕಾರದ ಮಾನ್ಯತೆ ಹೊಂದಿರುವ
ಉಡುಪಿ ಇನ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಆ್ಯಂಡ್ ಟೂರಿಸಂ ಸೈಯನ್ಸ್ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಪದವಿ ಕೋರ್ಸ್ ಲಭ್ಯವಿದೆ. ದೇಶ, ವಿದೇಶಗಳಲ್ಲಿ ಬಹುಬೇಡಿಕೆಯಿರುವ ಸೇವಾ ಕ್ಷೇತ್ರದ ಕೋರ್ಸ್ ಇದಾಗಿದೆ.

ಹೋಟೆಲ್, ಆಹಾರ ಮತ್ತು ಪಾನೀಯ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ವಿಷಯಗಳನ್ನು ಈ ಕೋರ್ಸ್
ಒಳಗೊಂಡಿದೆ. ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಹೋಟೆಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ವ್ಯಾಪಕವಾಗಿವೆ. ಆತಿಥ್ಯ ವಿಜ್ಞಾನದ ಶಿಕ್ಷಣವು ಸ್ವಂತ ಹೋಟೆಲ್ ಉದ್ಯಮ, ವಿವಿಧ ಸೇವಾ ಕ್ಷೇತ್ರಗಳಾದ ಬಾಣಸಿಗ, ಫ್ರಂಟ್ ಆಫೀಸ್
ಮ್ಯಾನೇಜರ್, ರೆಸ್ಟೋರೆಂಟ್ ವ್ಯವಸ್ಥಾಪಕ, ಪ್ರವಾಸಿ ಶಿಪ್‌ಗಳಲ್ಲಿ ಆತಿಥ್ಯ ಸೇವೆ, ವಿಮಾನಯಾನ, ರೈಲ್ವೇ, ಆಸ್ಪತ್ರೆ, ಕೈಗಾರಿಕೆ, ಸಾಂಸ್ಥಿಕ ಕ್ಯಾಂಟೀನ್, ಫುಡ್‌ಕೋರ್ಟ್, ಪ್ರವಾಸೋದ್ಯಮ, ರಕ್ಷಣಾ ಕ್ಷೇತ್ರ, ಈವೆಂಟ್ ಉದ್ಯಮಗಳಲ್ಲಿ ಸೇರಿದಂತೆ ನಾನಾ
ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿದೆ.

ಬಿ. ಎಸ್.ಸ್ಸಿ ಫುಡ್ ಟೆಕ್ನಾಲಾಜಿ ಕೋರ್ಸ್ :
ಇದು ಆಹಾರ ತಂತ್ರಜ್ಞಾನ ಮತ್ತು ಉತ್ಪನ್ನಗಳ ಕುರಿತ ವಿಶೇಷ ಕೋರ್ಸ್ ಆಗಿದೆ. ಆಹಾರ ಸಂರಕ್ಷಣೆ, ಸಂಸ್ಕರಣೆ, ಪ್ಯಾಕೇಜಿಂಗ್, ವಿತರಣಾ ಕ್ಷೇತ್ರದ ಅಗತ್ಯತೆಗಳ ಬಗ್ಗೆ ವೈಜ್ಞಾನಿಕ ರೀತಿಯ ಜ್ಞಾನವನ್ನು ನೀಡುತ್ತದೆ. ಆಹಾರ ತಯಾರಿಕೆ, ಆಹಾರದ
ರಸಾಯನಿಕ ತಂತ್ರಜ್ಞಾನ, ಡೈರಿ ತಂತ್ರಜ್ಞಾನ, ಆಹಾರ ಉದ್ಯಮಶೀಲತೆ ಇತ್ಯಾದಿಗಳ ಕುರಿತು ಆಳವಾದ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುತ್ತದೆ. ದೇಶ, ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗ ಅವಕಾಶಗಳನ್ನು ಹೊಂದಿರುವ ಹೊಸ
ಕ್ಷೇತ್ರಗಳಾಗಿವೆ.

ಈ ಕೋರ್ಸ್ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಆಹಾರ ತಯಾರಿಕೆ ಮತ್ತು ಸಂಸ್ಕರಣಾ ಘಟಕ, ಕೃಷಿ-ಬಯೋಟೆಕ್, ಡೈರಿ ಮತ್ತು ಕುಕ್ಕುಟ ಉದ್ಯಮ ಕ್ಷೇತ್ರಗಳು, ಬೇಕರಿಗಳು, ಪಾನೀಯ ಉದ್ಯಮ, ಆಹಾರ ಪ್ಯಾಕೇಜಿಂಗ್, ಆಹಾರ ಸುರಕ್ಷತಾ ಲೆಕ್ಕಪರಿಶೋಧನೆ, ಆಹಾರ ಸೂಕ್ಷ್ಮ ಜೀವಶಾಸ್ತ್ರಜ್ಞ, ಆಹಾರ ತಂತ್ರಜ್ಞ, ಆಹಾರ ರಸಾಯನ ಶಾಸ್ತ್ರಜ್ಞ, ಆಹಾರ ಗುಣಮಟ್ಟ ನಿಯಂತ್ರಕರು, ಆಹಾರ ನಿರೀಕ್ಷಕರು, ಆಹಾರೋತ್ಪನ್ನ ತಯಾರಿಕಾ ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಉದ್ಯೋಗ ಅವಕಾಶಗಳಿವೆ.

ಬಿ.ಎಸ್‌ಸಿ ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್ ಕೋರ್ಸ್:

ಪ್ರಸಕ್ತ ಸಂದರ್ಭ ಒಳಂಗಾಣ ವಿನ್ಯಾಸವು (ಇಂಟೀರಿಯರ್ ಡಿಸೈನ್) ಬಹುಬೇಡಿಕೆಯಿರುವ ಕ್ಷೇತ್ರವಾಗಿದೆ. ನಾನಾ ವಿನ್ಯಾಸಗಳಿಗೆ ಸಂಬಂಧಿಸಿದ ಆಳವಾದ ಜ್ಞಾನ ನೀಡುವ ಅಭ್ಯಾಸ, ಚಟುವಟಿಕೆಗಳನ್ನು ಈ ಕೋರ್ಸ್ನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ನಾನಾ ಬಣ್ಣಗಳ ಸಮತೋಲನ, ವಸ್ತುಗಳು, ನಾನಾ ಉಡುಪುಗಳ ಜ್ಞಾನ, ಶೈಲಿಗಳು, ಒಳವಿನ್ಯಾಸ ಕ್ಷೇತ್ರದಲ್ಲಿ ಸೃಜನಶೀಲತೆ ಪ್ರಜ್ಞೆ, ಸಂಕೇತಗಳ ಪರಿಚಯ, ಕಂಪ್ಯೂಟರ್ ಕೌಶಲ್ಯ, ಸಂವಹನ ಪ್ರಜ್ಞೆ, ಈ ಕ್ಷೇತ್ರದ ಸೇವೆ ಪಡೆಯುವವರ ಸಾಮಾಜಿಕ, ಸಾಂಸ್ಕೃತಿಕ ಒಳ ಪ್ರಜ್ಞೆಗಳನ್ನು ತಿಳಿದುಕೊಳ್ಳುವ ಕೌಶಲ್ಯಗಳನ್ನು ಅಭ್ಯಾಸ ಮಾಡಲಾಗುತ್ತದೆ. ಒಳಂಗಾಣ ವಸ್ತುಗಳು ಜೋಡಣೆ, ಪೀಠೋಪಕರಣಗಳು, ಬೆಳಕು ತಂತ್ರಜ್ಞಾನದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.

ಈ ಕೋರ್ಸ್ಗಳನ್ನು ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ವಸತಿ, ವಾಣಿಜ್ಯ ಸಮುಚ್ಚಯ ಒಳವಿನ್ಯಾಸ, ವಿಮಾನ, ಶಿಪ್ ಇತ್ಯಾದಿಗಳ ಒಳಾಂಗಣ ಕ್ಷೇತ್ರದ ವಿನ್ಯಾಸ, ಬಣ್ಣದ ಬಳಕೆಯ ಸಲಹೆಗಾರರು ಹಾಗೂ ಸ್ವಂತ ವಿನ್ಯಾಸ ಸಂಸ್ಥೆ ಸ್ಥಾಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಅವಕಾಶವಿದೆ.

ಬಿ.ಎಸ್‌ಸಿ ಫ್ಯಾಶನ್ ಡಿಸೈನ್ ಕೋರ್ಸ್ :

ಆಧುನಿಕ ಫ್ಯಾಶನ್ ಜಗತ್ತಿಗೆ ಪೂರಕವಾಗಿರುವ ಆಳವಾದ ಜ್ಞಾನವನ್ನು ಈ ಕೋರ್ಸ್ನಲ್ಲಿ ಅಭ್ಯಾಸಿಸಲಾಗುತ್ತದೆ. ಕೈ ಅಥವಾ ಕಂಪ್ಯೂಟರ್ ಮೂಲಕ ನಾನಾ ವಿನ್ಯಾಸಗಳನ್ನು ರೂಪಿಸುವ ಬಗ್ಗೆ ತರಬೇತಿ, ವಿಶೇಷ ಕೌಶಲ್ಯ, ಬಟ್ಟೆಗಳು, ಅದರ
ಬಣ್ಣಗಳ ಆಯ್ಕೆ, ಖರೀದಿ, ವಿನ್ಯಾಸ, ಟೈಲರಿಂಗ್, ಬಟ್ಟೆಗಳ ವಿಶೇಷ ರೀತಿಯ ಫ್ಯಾಶನ್ ಡಿಸೈನ್‌ಗಳು, ತಾಂತ್ರಿಕ ದೃಷ್ಠಿಕೋನದ ವಿನ್ಯಾಸ, ವಿಭಿನ್ನ ರೀತಿಯ ಒಳನೋಟವನ್ನು ಅರಿಯುವ ಅವಕಾಶ ಈ ಕೋರ್ಸ್ನಲ್ಲಿದೆ. ನಮ್ಮ ದೇಶ ಹಾಗೂ ವಿದೇಶಗಳಲ್ಲಿ ಅತ್ಯಂತ ಬೇಡಿಕೆ ಇರುವ ಕೋರ್ಸ್ ಇದಾಗಿದೆ.

ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಉಡುಪು ಉದ್ಯಮ, ವಸ್ತ್ರ ವಿನ್ಯಾಸ, ಸ್ವತಂತ್ರ
ವಿನ್ಯಾಸ ಉದ್ಯಮ, ಫ್ಯಾಶನ್ ಇಲ್ಲಸ್ಟೇಶನ್, ಫ್ಯಾಶನ್ ಪ್ರಿಡಿಕ್ಟರ್, ಪಾದರಕ್ಷೆ ಮತ್ತು ಪರಿಕರ ವಿನ್ಯಾಸ ಕ್ಷೇತ್ರ, ಪ್ಯಾಟರ್ನ್ ಕಟ್ಟರ್, ಗ್ರೇಡರ್, ಫ್ಯಾಶನ್ ಸಂಸ್ಥೆಗಳಲ್ಲಿ
ಮಾರ್ಕೆಟಿಂಗ್, ಉಡುಪು ಮತ್ತು ಪರಿಕರಗಳ ತಯಾರಿಕೆ, ಫ್ಯಾಶನ್ ಕಂಪನಿಗಳ ಸುಸ್ಥಿರತೆಯ ತಜ್ಞರಾಗಿ ದುಡಿಮೆ, ಫ್ಯಾಶನ್ ಪತ್ರಕರ್ತರಾಗಿ ಉದ್ಯೋಗ ಮಾಡುವ ವಿಫುಲ ಅವಕಾಶಗಳಿವೆ.

ಬಿಸ್‌ನೆಸ್ ಅಡ್ಮಿನಿಸ್ಟೇಶನ್ ಬಿ.ಬಿ.ಎ., ಕಾಮರ್ಸ್ ಬಿ.ಕಾಂ., ಕಂಪ್ಯೂಟರ್ ಅಪ್ಲೀಕೇಶನ್ ಬಿ.ಸಿ.ಎ ಕೋರ್ಸ್ಗಳು :

ಬಿಸ್‌ನೆಸ್ ಅಡ್ಮಿನಿಸ್ಟೇಶನ್ ಬಿ.ಬಿ.ಎ., ಕಾಮರ್ಸ್ ಬಿ.ಕಾಂ., ಕಂಪ್ಯೂಟರ್ ಅಪ್ಲೀಕೇಶನ್ ಬಿ.ಸಿ.ಎ ಕೋರ್ಸ್ಗಳ ಜತೆಗೆ ಏವಿಯೇಶನ್ ಮತ್ತು ಆತಿಥ್ಯ ನಿರ್ವಹಣೆ ಅಥವಾ ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ ನಿರ್ವಹಣೆ ಅಥವಾ ಕೃತಕ ಬುದ್ಧಿಮತ್ತೆ,
ದತ್ತಾಂಶ ವಿಶ್ಲೇಷಣೆ ಮತ್ತು ಸೈಬರ್ ಭದ್ರತೆ, ಸಿಎ ಕೋಚಿಂಗ್ ಆ್ಯಡ್‌ಆನ್ ಕೋರ್ಸ್ಗಳನ್ನು ಪಡೆದುಕೊಳ್ಳುವ ಅವಕಾಶವಿದೆ.

ಸಾಂಪ್ರದಾಯಿಕವಾಗಿ ಇರುವ ಈ ಕೋರ್ಸ್ಗಳಿಗೆ ಇಲ್ಲಿ ಉಲ್ಲೇಖಿಸಲಾದ ಆ್ಯಡ್‌ಆನ್ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಈ ಕೋರ್ಸ್ಗಳನ್ನು ಅಭ್ಯಾಸಿಸಿದ ವಿದ್ಯಾರ್ಥಿಗಳಿಗೆ ವ್ಯಾಪಕವಾಗಿ ಉದ್ಯೋಗ ಅವಕಾಶಗಳು ಲಭಿಸುತ್ತವೆ. ಹಣಕಾಸು, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಅಧಿಕಾರಿ, ಬ್ಯಾಂಕ್‌ಗಳು, ವ್ಯವಹಾರ ಸಲಹೆ, ವಾಣಿಜ್ಯ, ಲೆಕ್ಕಪರಿಶೋಧನೆ, ತೆರಿಗೆ ಮತ್ತು ನಿರ್ವಹಣೆ, ತೆರಿಗೆ ಸಲಹೆ, ಸ್ಟಾಕ್ ಬ್ರೋಕರ್, ಅಕೌಂಟೆಟ್, ಕಂಪ್ಯೂಟರ್ ಅಪ್ಲಿಕೇಶನ್, ಸಾಫ್ಟ್ವೇರ್ ಅಭಿವೃದ್ದಿ, ಗ್ರಾಹಕ ಸೇವಾ ವ್ಯವಸ್ಥಾಪಕರು, ಪ್ರವಾಸೋದ್ಯಮ ಅಧಿಕಾರಿ, ಟೂರ್ ಮ್ಯಾನೇಜರ್, ಏರ್ ಕ್ಯಾಬಿನ್ ಕ್ರೂ, ಏರ್ ಹೊಸ್ಟ್ಸ್, ಅಗ್ನಿಶಾಮಕ ದಳದ ಅಧಿಕಾರಿ, ಭದ್ರತಾ ಅಧಿಕಾರಿ, ಬಿಸ್‌ನೆಸ್ ಇಂಟೆಲಿಜೆನ್ಸ್, ಡೇಟಾ ಬೇಸ್ ಅಭಿವೃದ್ದಿ, ಡಾಟಾ ಎಂಜಿನೀಯರ್, ರೊಬೊಟಿಕ್ ವಿಜ್ಞಾನ, ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವ್ಯಾಪಕವಾದ ಉದ್ಯೋಗ ಅವಕಾಶಗಳಿವೆ.

ಉಡುಪಿ ಕಾಲೇಜ್ ಅಫ್ ನರ್ಸಿಂಗ್ :
ಬಿ.ಎಸ್.ಸ್ಸಿ ನರ್ಸಿಂಗ್, ಪಿ.ಸಿ.ಬಿ.ಎಸ್.ಸ್ಸಿ ನರ್ಸಿಂಗ್ ಹಾಗೂ ಎಂ.ಎಸ್.ಸ್ಸಿ ನರ್ಸಿಂಗ್, ಕೋರ್ಸ್ಗಳನ್ನು ಇಲ್ಲಿ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ
ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮಗ್ರ ಶುಶ್ರೂಷೆಯನ್ನು ಒದಗಿಸುವ ಜ್ಞಾನ ಮತ್ತು ಕೌಶಲ್ಯ ಒದಗಿಸುವ ಅತ್ಯಾಧುನಿಕ ತರಬೇತಿಯನ್ನು ಈ
ಕೋರ್ಸ್ಗಳ ಮೂಲಕ ವಿದ್ಯಾರ್ಥಿಗಳನ್ನು ಸಮಗ್ರವಾಗಿ ಸಜ್ಜುಗೊಳಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿಯಿಂದ ವಿದ್ಯಾರ್ಥಿಗಳು ಹೆಚ್ಚು ವೃತ್ತಿಪರತೆಯಲ್ಲಿ ಇಲ್ಲಿ ಸೇವೆಗೆ ಸಿದ್ಧರಾಗುತ್ತಾರೆ. ಈ ಕೋರ್ಸ್ಗಳ ತರಬೇತಿ ಪಡೆದ ವಿದ್ಯಾರ್ಥಿಗಳು
ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಚಿಕಿತ್ಸಾಲಯಗಳು, ಆರೋಗ್ಯ ಇಲಾಖೆ,
ರೈಲೈ, ರಕ್ಷಣಾ ಇಲಾಖೆ ಇತ್ಯಾದಿಗಳಲ್ಲಿ ಅಲ್ಲದೆ ದೇಶ, ವಿದೇಶಗಳಲ್ಲಿ ವಿಫುಲವಾದ ಉದ್ಯೋಗ ಅವಕಾಶಗಳು ಇವೆ.

ಸ್ಕೂಲ್ ಆಫ್ ನರ್ಸಿಂಗ್:
ವಿಜ್ಞಾನ ಶಿಕ್ಷಣ ಪಡೆಯದ ವಿದ್ಯಾರ್ಥಿಗಳಿಗೂ ನರ್ಸಿಂಗ್ ವಿದ್ಯಾಭ್ಯಾಸ ಪಡೆಯಲು ಪೂರಕವಾಗುವಂತೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೋರ್ಸ್ನ್ನು ಒದಗಿಸಲಾಗುತ್ತದೆ. ಪಿಯುಸಿಯಲ್ಲಿ ಕಲಾ,
ವಾಣಿಜ್ಯ ಹೀಗೆ ಯಾವುದೇ ಕ್ಷೇತ್ರದಲ್ಲಿ ಶಿಕ್ಷಣ ಪಡೆದರೂ ಈ ಕೋರ್ಸ್ ಪಡೆಯಲು ವಿದ್ಯಾರ್ಥಿಗಳು ಅರ್ಹರಾಗುತ್ತಾರೆ. ಆರೋಗ್ಯ ಕ್ಷೇತ್ರದ ಎಲ್ಲಾ ರಂಗದಲ್ಲೂ ಇವರಿಗೆ ಉದ್ಯೋಗಾವಕಾಶ ವ್ಯಾಪಕವಾಗಿದೆ.

ಬ್ಯಾಚುಲರ್ ಆಫ್ ಫಿಸಿಯೋಥೆರಪಿ:
ದೇಶ ವಿದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ
ಅತ್ಯಂತ ಬೇಡಿಕೆಯಿರುವ ಕೋರ್ಸ್ ಇದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಜೀವನಶೈಲಿಯ
ಬದಲಾವಣೆಯಿಂದಾಗಿ ದೇಹದಲ್ಲಿ ಗಾಯ, ನೋವುಗಳು ಹೆಚ್ಚುತ್ತಿದ್ದು, ಇದನ್ನು
ಸಮರ್ಥವಾಗಿ ನಿರ್ವಹಿಸಲು ಭೌತ ಚಿಕಿತ್ಸೆಯನ್ನು ಒದಗಿಸಿ, ಜೀವನ ಸಮತೋಲನ
ಮಾಡುವ ವಿಶೇಷ ಕೌಶಲ್ಯ ಆಧಾರಿತ ಕೋರ್ಸ್ ಇದಾಗಿದೆ.

ಅಲೈಡ್ ಹೆಲ್ತ್ ಸೈಯನ್ಸ್ ಕೋರ್ಸ್ ಗಳು:
ಬಿ.ಎಸ್‌ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಬಿ. ಎಸ್ಸಿ ಕಾರ್ಡಿಯಕ್ ಕೇರ್ ಟೆಕ್ನಾಲಜಿ, ಬಿ. ಎಸ್‌ಸಿ ರೆಸ್ಪಿರೇಟರಿ ಕೇರ್ ಟೆಕ್ನಾಲಜಿ, ಬಿ. ಎಸ್‌ಸಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಕೋರ್ಸ್ಗಳು ಕಾಲೇಜಿನಲ್ಲಿ ಲಭ್ಯವಿವೆ. ಕರ್ನಾಟಕ ರಾಜ್ಯ ಶುಶ್ರೂಷ
ಡಿಪ್ಲೋಮಾ ಪರೀಕ್ಷಾ ಮಂಡಳಿ, ಬೆಂಗಳೂರು, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಹೊಂದಿದೆ. ಇವು ಅತೀ ಹೆಚ್ಚು ಉದ್ಯೋಗ ಅವಕಾಶ ಒದಗಿಸುವ ವೃತ್ತಿ ಆಧಾರಿತ ಶೈಕ್ಷಣಿಕ ಕೋರ್ಸ್ಗಳಾಗಿವೆ.

ಅಪಘಾತ ಸೇರಿದಂತೆ ನಾನಾ ಆನಾರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದು, ಅರೆವೈದ್ಯಕೀಯ
ಸಿಬ್ಬಂದಿ ಕೌಶಲ್ಯಗಳ ತಿಳುವಳಿಕೆ, ಆರೋಗ್ಯ ವಲಯದ ಆಧುನಿಕ ತಂತ್ರಜ್ಞಾನದ ಅರಿವು ಸೇರಿದಂತೆ ಅನೇಕ ವಿಷಯಗಳ ಜ್ಞಾನ, ಪ್ರಾಯೋಗಿಕ ತರಬೇತಿಯನ್ನು
ನೀಡಲಾಗುತ್ತದೆ. ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ನಾನಾ ಕ್ಷೇತ್ರದಲ್ಲಿ ಹಾಗೂ ವಿದೇಶಗಳಲ್ಲಿ ವ್ಯಾಪಕ ಉದ್ಯೋಗ ಅವಕಾಶಗಳು ಇವೆ.

ಸುಸಜ್ಜಿತ ಗ್ರಂಥಾಲಯ :
ಕಾಲೇಜು ಸುಸಜ್ಜಿತ ಮತ್ತು ವಿಶಾಲವಾದ ಗ್ರಂಥಾಲಯವನ್ನು ಹೊಂದಿದೆ. ಭಾರತ
ಮತ್ತು ವಿದೇಶಗಳ ಇತ್ತೀಚಿನ ಆವೃತ್ತಿಯ ಗ್ರಂಥಗಳು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ದೇಶ ಮತ್ತು ವಿದೇಶಗಳ ವಿಶೇಷ ನಿಯತಕಾಲಿಕಗಳು
ದೊರೆಯುತ್ತವೆ.

ವಿಶೇಷ ತರಬೇತಿ : ಪಠ್ಯದ ಬಗ್ಗೆ ಇನ್ನಷ್ಟು ಪೂರಕ ಮಾಹಿತಿ ಮತ್ತು ತರಬೇತಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಕಾಲೇಜು ಸಮಯದ ನಂತರ ವಿಶೇಷ ತರಬೇತಿ ತರಗತಿಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ವೃತ್ತಿಪರರು, ತಜ್ಞರು ಆಗಮಿಸಿ
ಅನುಮಾನಗಳನ್ನು ಪರಿಹರಿಸುತ್ತಾರೆ. ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ, ವಿಶೇಷ  ಜ್ಞಾನ, ಸಂದೇಹ ಪರಿಹಾರವನ್ನು ಈ ತರಗತಿಗಳಲ್ಲಿ ಮಾಡಲಾಗುತ್ತದೆ.

ಪಠ್ಯೇತರ ಚಟುವಟಿಕೆಗಳು :
ಕಾಲೇಜಿನಲ್ಲಿ ಪಠ್ಯದ ಜತೆಗೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಲ್ಯಾಂಪ್ ಲೈಟಿಂಗ್ ಸಮಾರಂಭ, ಪ್ರತಿಭಾ ದಿನಾಚರಣೆ,
ವಾರ್ಷಿಕೋತ್ಸವ ಸಮಾರಂಭ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ
ಪ್ರತಿಭೆಯ ಪ್ರದರ್ಶನ ಮತ್ತು ವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತದೆ. ವಿಶ್ವ ಆರೋಗ್ಯ
ದಿನ, ವಿಶ್ವ ಏಡ್ಸ್ ದಿನ, ವಿಶ್ವ ಕ್ಯಾನ್ಸರ್ ದಿನ, ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಇತ್ಯಾದಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ಅಭಿವೃದ್ದಿಗೆ ಒತ್ತು ನೀಡಲಾಗುತ್ತದೆ. ಜತೆಗೆ ಕ್ರೀಡೆ, ಸಾಂಸ್ಕೃತಿಕ
ಮತ್ತು ಇತರ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.

ಹಾಸ್ಟೆಲ್ ಸೌಲಭ್ಯಗಳು :
ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ
ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ಓದಿಗೆ ಪೂರಕವಾದ ಪರಿಸರ, ಸ್ವಚ್ಚತೆ
ಹಾಗೂ ವಿವಿಧ ಸೌಲಭ್ಯಗಳು ಹಾಸ್ಟೆಲ್‌ನಲ್ಲಿ ಲಭ್ಯ. ಹಾಸ್ಟೆಲ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರ, ಮನರಂಜನಾ ಸಭಾಂಗಣ, ಪ್ರಾರ್ಥನ ಮಂದಿರ ಮತ್ತು ದೂರದರ್ಶನ ಸೌಲಭ್ಯಗಳನ್ನು ಹಾಸ್ಟೆಲ್ ಹೊಂದಿದೆ.

ಪರೀಕ್ಷಾ ಕೇಂದ್ರ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯವು
ಉಡುಪಿ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಯನ್ನು 2005ರಿಂದ ಉಡುಪಿ ಜಿಲ್ಲೆಯ
ಎಲ್ಲಾ ನರ್ಸಿಂಗ್ ಕಾಲೇಜುಗಳ ಪರೀಕ್ಷಾ ಕೇಂದ್ರವಾಗಿ ಅಧಿಕೃತವಾಗಿ ಘೋಷಿಸಿ
ನೇಮಿಸಿದ್ದು ಕಾಲೇಜಿನ ಸರ್ವ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಈಗಾಗಲೇ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶದ ಪ್ರಮುಖ
ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೆ ವಿದೇಶಗಳಲ್ಲಿ
ಉತ್ತಮ ಭವಿಷ್ಯ ರೂಪಿಸಿಕೊಂಡಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣದ ಪ್ರತೀಕವಾಗಿದೆ.

ಪ್ರಸಕ್ತ ವರ್ಷ ಸಂಸ್ಥೆಯು 20ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ
ಮತ್ತು ಉಲ್ಲೇಖನೀಯ. 2021-22ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ
ಆರಂಭಗೊಂಡಿದ್ದು, ದ್ವಿತೀಯ ಪಿಯುಸಿ ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ಉನ್ನತ
ಶಿಕ್ಷಣದ ಪ್ರವೇಶಾತಿ ಮಾಹಿತಿಗಾಗಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಮಣಿಪಾಲ
ಅನಂತನಗರದ ಕೆನರಾ ಟ್ರೈನಿಂಗ್ ಸೆಂಟರ್‌ನ ಮುಂಭಾಗದಲ್ಲಿರುವ ಉಡುಪಿ ಶಿಕ್ಷಣ
ಸಮೂಹ ಸಂಸ್ಥೆಗಳ ಕಚೇರಿಯನ್ನು ಸಂಪರ್ಕಿಸಬಹುದು.

ಪ್ರವೇಶಾತಿ ಪ್ರಕ್ರಿಯೆಯ ವಿವರ, ಶಿಕ್ಷಣ ಸಾಲ ಸೌಲಭ್ಯ, ವಿವಿಧ ವಿದ್ಯಾರ್ಥಿ ವೇತನ,
ಉದ್ಯೋಗಾವಕಾಶಗಳು ಹಾಗೂ ಸಮಗ್ರ ಮಾಹಿತಿಗಾಗಿ ಸಂಪರ್ಕಿಸಿರಿ:
ಉಡುಪಿ ಶಿಕ್ಷಣ ಸಮೂಹ ಸಂಸ್ಥೆಗಳು,
ಸಿ.ಐ.ಬಿ.ಎಂ ನ ಮುಂಭಾಗ,
ಅನಂತನಗರ, ಮಣಿಪಾಲ. ಫೋನ್ : 98448 98383, 96115 86912, 0820-2570924.

http://www.udupicolleges.edu.in

ಮಾಹಿತಿ ಕೇಂದ್ರ: ಉತ್ತರ ಕನ್ನಡ ಮತ್ತು ಶಿವಮೊಗ್ಗ
ವಿಜಯಲಕ್ಷ್ಮೀ ಕಾಂಪ್ಲೆಕ್ಸ್
ಮೊದಲ ಮಹಡಿ ಸಾಗರ ಕ್ರಾಸ್, ಹೊಸೂರು
ಸಿದ್ದಾಪುರ-581355
ಮೊಬೈಲ್: 9141180989

ಮಾಹಿತಿ ಕೇಂದ್ರ: ಗೋವಾ
# 708, ಗೆರ ಗ್ರಾಂಡ್, ಪಾಟೋ,
ಪಣಜಿ, ಗೋವಾ-403001
ಮೊಬೈಲ್: 9890449719