ಬ್ರಿಟನ್ ನಲ್ಲಿ ಕೋವಿಡ್ ಮೂರನೇ ಅಲೆ ಆರಂಭ: ಸತತ ಮೂರನೇ ದಿನವೂ 10 ಸಾವಿರ ಪ್ರಕರಣ ಪತ್ತೆ

ಲಂಡನ್: ಯುನೈಟೆಡ್ ಕಿಂಗ್ ಡಮ್ (ಯುಕೆ) ನಲ್ಲಿ ಕೋವಿಡ್ 3ನೇ ಅಲೆಯ ಸೋಂಕು ಆರಂಭವಾಗಿದ್ದು, ಸತತ ಮೂರನೇ ದಿನವಾದ ಶನಿವಾರ (ಜೂನ್ 19) ಹತ್ತು ಸಾವಿರ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕ್ಷಿಪ್ರವಾಗಿ ಹರಡುತ್ತಿಲ್ಲ ಎನ್ನುವುದು ಕೊಂಚ ಮಟ್ಟಿಗೆ ಆಶಾದಾಯವಾಗಿದೆ. ಆದರೆ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದು ಮೂರನೇ ಅಲೆ ಆರಂಭವಾಗಿದೆಂದು ತಿಳಿಯಬೇಕಾಗಿದೆ ಎಂಬುದಾಗಿ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್ 19 ಲಸಿಕೆ ಕಾರ್ಯಕ್ರಮದ ವೇಗವನ್ನು ಇನ್ನಷ್ಟು ತ್ವರಿತಗೊಳಿಸಬೇಕಾಗಿದೆ ಎಂದಿರುವ ತಜ್ಞರು, ಮುಖ್ಯವಾಗಿ ಹಿರಿಯ ವ್ಯಕ್ತಿಗಳು ಎರಡನೇ ಡೋಸ್ ಪಡೆಯಬೇಕಾಗಿದೆ. ಅಲ್ಲದೇ ಮೂರನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ಸೋಂಕು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನಲ್ಲಿನ ಲಸಿಕಾ ಕಾರ್ಯಕ್ರಮವು ಡೆಲ್ಟಾ ರೂಪಾಂತರ ಸೋಂಕನ್ನು ತಡೆಗಟ್ಟಲಿದೆ ಎಂಬ ಬಗ್ಗೆ ವಿಶ್ವಾಸವಿಲ್ಲ. ಆದರೆ ಕೆಲವೊಂದು ಆಧಾರದ ಮೇಲೆ ಆಶಾಭಾವ ಹೊಂದಬಹುದು ಎಂದು ಭಾವಿಸಿದ್ದೇನೆ. ಅಂಕಿಅಂಶದ ಪ್ರಕಾರ ಕೋವಿಡ್ ಪ್ರಕರಣದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ.