ಹಿರಿಯಡಕ: ಬಿಜೆಪಿ ಮುಖಂಡ, ಸಮಾಜಸೇವಕ ಸುಧಾಕರ್ ಶೆಟ್ಟಿ ಮಟ್ಟಿ ಬೈಲು (56) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಸುಧಾಕರ್ ಶೆಟ್ಟಿ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ಪುತ್ತಿಗೆ ಸೇತುವೆ ಉಳಿಸುವಲ್ಲಿ ಹೋರಾಟ ನಡೆಸಿ ಸೈ ಎನಿಸಿಕೊಂಡಿದ್ದರು. ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಸಾವಿರಾರು ಕದಿರು ಸೇವೆ ನೀಡುತ್ತಿದ್ದರು.
ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು, ಕಾಪು ಕ್ಷೇತ್ರದ ಮಾಜಿ ಶಾಸಕ ದಿ. ಭಾಸ್ಕರ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷದಲ್ಲಿ ಸಕ್ರಿಯರಾಗಿದ್ದರು.
ಅವರು ಪರ್ಕಳ ಶಾಮರಾಯ ಸರ್ಕಲ್ ಬಳಿ ಕಟ್ಟಿಗೆ ಡಿಪೋ ಮತ್ತು ಫರ್ನಿಚರ್ ಅಂಗಡಿ ಹೊಂದಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.