ಉಡುಪಿ ಜೂ4: ಬೆಂಗಳೂರಿನ ಡಿಜಿಪಿ ಕಚೇರಿಯಿಂದ ಉಡುಪಿ ಜಿಲ್ಲಾ ಗೃಹರಕ್ಷಕ ಕಚೇರಿಗೆ 2 ಇನ್ ಫ್ಲೆಟೇಬಲ್ ಬೋಟ್, 1 ಒಬಿಎಂ ನೀಡಲಾಗಿದ್ದು, ಇದರೊಂದಿಗೆ ಉಡುಪಿ ಜಿಲ್ಲಾಡಳಿತ ನೀಡಿರುವ ರೈನ್ ಕೋಟ್, ಲೈಫ್ ಜಾಕೆಟ್, ಟ್ಯೂಬ್, ಗಮ್ ಬೂಟ್ ಮತ್ತು ಹಗ್ಗಗಳನ್ನು, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಪ್ರವಾಹ ಪೀಡಿತ ಸ್ಥಳಗಳಾದ ಪಡುಬಿದ್ರಿ ಮತ್ತು ಬ್ರಹ್ಮಾವರಕ್ಕೆ ಪಡುಬಿದ್ರಿ ಘಟಕಾಧಿಕಾರಿ ನವೀನ್ ಕುಮಾರ್, ಬ್ರಹ್ಮಾವರ ಘಟಕದ ಘಟಕಾಧಿಕಾರಿ ಸ್ಟೀವನ್ಪ್ರಕಾಶ್ ಅವರಿಗೆ ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿ ಇಂದು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಪಡುಬಿದ್ರೆಮತ್ತು ಬ್ರಹ್ಮಾವರ ಎರಡು ಕಡೆ ತಲಾ 5ರಂತೆ ಗೃಹರಕ್ಷಕ ಸಿಬ್ಬಂದಿ ಆಯಾ ಘಟಕದ ತಹಶೀಲ್ದಾರ್ಅವರಲ್ಲಿ ವರದಿ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಇದು ಕರ್ತವ್ಯಕ್ಕೆ ಬಳಸಲಾಗುತ್ತದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಡುಬಿದ್ರಿ, ಕಾಪು, ಮಲ್ಪೆ, ಮರವಂತೆಬೀಚ್ಗೆ ತಲಾ ಇಬ್ಬರು ಗೃಹರಕ್ಷಕರನ್ನು ನೇಮಕಮಾಡಲಾಗಿದೆ. ಜಿಲ್ಲೆಯ 50 ಪೊಲೀಸ್ ಠಾಣೆಗಳಲ್ಲಿ ಎಪ್ರಿಲ್ ತಿಂಗಳಿನಿಂದ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೋವಿಡ್ ಮಾರ್ಷಲ್ ಕೆಲಸಕ್ಕೆಂದು 135 ಮಂದಿ ಗೃಹರಕ್ಷಕರು ಸೇವೆಸಲ್ಲಿಸುತ್ತಿದ್ದಾರೆ. ಜತೆಗೆ ಉಡುಪಿ ಅಗ್ನಿಶಾಮಕ ದಳದ ಕಾರ್ಕಳ, ಕುಂದಾಪುರದಲ್ಲಿ 19, ಉಡುಪಿ ಆರ್ಟಿಒದಲ್ಲಿ 5, ಎನ್ಸಿಸಿ 2 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಸಮಾದೇಷ್ಟರಾದ ಡಾ| ಪ್ರಶಾಂತ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಟ್ ರಮೇಶ್ ಪಜಾರಿ, ಕಾಪು ತಹಶೀಲ್ದಾರ್ ಪ್ರತಿಭಾ ಆರ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕಮಾರ್, ಕಾಪು ಘಟಕಾಧಿಕಾರಿ ಲಕ್ಷ್ಮಿನಾರಾಯಣ, ಕಚೇರಿ ಅಧೀಕ್ಷಕಿ ಕವಿತಾ, ಪ್ರ.ದ.ಸ. ಶ್ಯಾಮಲಾ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು.