ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣ.ಇಂದಿನ ಅಂಕಣ ಬರೆದವರು ಸಿಂಥಿಯಾ ಮೆಲ್ವಿನ್
ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಪ್ರತಿದಿನ ತಾಜಾ ಮತ್ತು ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಎಲ್ಲಾ ತರಕಾರಿಗಳನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಆದರೆ ಸಲಾಡ್ ರೂಪದಲ್ಲಿ ತಿನ್ನಬಹುದಾದಂತಹ ತರಕಾರಿಗಳು ನಮ್ಮ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದು ಅತ್ಯಂತ ಆರೋಗ್ಯಕರ ಆಹಾರ. ಆಹಾರದಲ್ಲಿ ಸಲಾಡ್ ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ, ಜೀರ್ಣಕ್ರಿಯೆಗೆ ಸಹಕಾರಿ, ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಉಲ್ಲಾಸ ನೀಡುತ್ತದೆ.
ಜೊತೆಗೆ ಮೊಳಕೆಭರಿಸಿದ ಕಾಳುಗಳು ಮುಖ್ಯವಾಗಿ ಹೆಸ್ರುಕಾಳು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭದಾಯಕ. ಅದೇ ರೀತಿ ಮೊಳಕೆಭರಿಸಿದ ಕಡಲೆ ಕಾಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಪುಷ್ಠಿಕರ ದೇಹ, ವಿವಿಧ ರೀತಿಯ ವಿಟಮಿನ್ಸ್ ದೇಹಕ್ಕೆ ಲಭಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಬೇಸರದ ಸಂಗತಿಯೆಂದರೆ ಇತ್ತೀಚಿನ ದಿನಗಳಲ್ಲಿ ತರಕಾರಿಗಳಿಗೆ ಕ್ರಿಮಿನಾಶಕವನ್ನು ಸಿಂಪಡಿಸುತ್ತಾರೆ. ಹಾಗೂ ತಾಜಾವಾಗಿ ಕಾಣಲು ಕೆಲವು ರಾಸಾಯನಗಳನ್ನು ಸಿಂಪಡಿಸುವುದರಿಂದ ನಾವು ಖರೀದಿಸುವ ಸೊಪ್ಪು- ತರಕಾರಿಗಳನ್ನು ಚೆನ್ನಾಗಿ ತೊಳೆದು 10-15 ನಿಮಿಷ ಒಂದು ಪಾತ್ರೆಯಲ್ಲಿ ನೀರಿನ ಜೊತೆ ಉಪ್ಪು ಮತ್ತು ವಿನಿಗರ್ ಅನ್ನು ಬೆರೆಸಿ ನಂತರ ತೊಳೆದು ಉಪಯೋಗಿಸುವುದು ಒಳ್ಳೆಯದು.
ಕೆಲವೊಂದು ಆರೋಗ್ಯಕರ ಸಲಾಡ್ ಗಳು ಇಲ್ಲಿದೆ:-
ವೆಜ್ ಫ್ರೂಟ್ ಸಲಾಡ್:
ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಪೈನಾಪಲ್, ಉದ್ದಕ್ಕೆ ಹೆಚ್ಚಿದ ಕ್ಯಾರೆಟ್, ಸಣ್ಣಗೆ ಉದ್ದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿದ ಮುಳ್ಳುಸೌತೆ, ಸ್ವಲ್ಪ ಮಾವಿನಕಾಯಿ, ದ್ರಾಕ್ಷಿ, ಸಣ್ಣಗೆ ಹೆಚ್ಚಿದ ಶುಂಠಿ, ಸ್ವಲ್ಪ ದಾಳಿಂಬೆಯ ಕಾಳುಗಳು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಇಷ್ಟನ್ನು ಉಪ್ಪು ಮತ್ತು ನಿಂಬೆರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
ಮೊಳಕೆಭರಿಸಿದ ಹೆಸರು ಕಾಳು
ಮೊಳಕೆಭರಿಸಿದ ಹೆಸರು ಕಾಳು, ಮೊಳಕೆಭರಿಸಿದ ಕಡಲೆ, ಸಣ್ಣಗೆ ಹೆಚ್ಚಿದ ಮುಳ್ಳುಸೌತೆ, ಕ್ಯಾಪ್ಸಿಕಂ, ಟೊಮೆಟೊ, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ ಇವೆಲ್ಲವನ್ನು ಬೆರೆಸಿ ಇದಕ್ಕೆ ನಿಂಬೆಯ ರಸ, ಚಾಟ್ ಮಸಾಲಾ, ಓಲಿವ್ ಆಯಿಲ್, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಒಂದೆಲಗ (ಬ್ರಾಹ್ಮಿ ಎಲೆ) ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ.
ಆಪಲ್ ಸಲಾಡ್
ಸಣ್ಣದಾಗಿ ಹೆಚ್ಚಿದ ಆಪಲ್,ಸಿಪ್ಪೆ ಮತ್ತು ಬೀಜವನ್ನು ಬೇರ್ಪಡಿಸಿದ ಮೂಸಂಬಿ ಹಣ್ಣಿನ ಹೋಳುಗಳು, ಸೀಡ್ ಲೆಸ್ ದ್ರಾಕ್ಷಿ, ಸಿಪ್ಪೆ ತೆಗೆದ ಮುಳ್ಳುಸೌತೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಸ್ವಲ್ಪ ಪುದಿನಾ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಇವೆಲ್ಲದರ ಜೊತೆಗೆ ಮೊಸರು, ಸ್ವಲ್ಪ ಸಕ್ಕರೆ, ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ.
ಸಿಂಥಿಯಾ ಮೆಲ್ವಿನ್ ಬಜಗೋಳಿಯ ಮುಡಾರು ನಿವಾಸಿ, ಗೃಹಿಣಿಯಾಗಿರುವ ಇವರಿಗೆ ನವೀನ ಪಾಕ ಪ್ರಯೋಗ, ಆರೋಗ್ಯಕರ ಜೀವನವಿಧಾನ ಅನುಸರಿಸುವಿಕೆ, ಸಂಗೀತ ಅಂದರೆ ಪ್ರೀತಿ